ADVERTISEMENT

ಹುಕ್ಕೇರಿ | ‘ಸಂವಿಧಾನದ ಆಶಯ ಈಡೇರಿಸಲು ಸಮಭಾವದಿಂದ ಪಾಲ್ಗೊಳ್ಳಿ’ : ಮಲ್ಲಾಡ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 6:04 IST
Last Updated 27 ನವೆಂಬರ್ 2025, 6:04 IST
<div class="paragraphs"><p>ಹುಕ್ಕೇರಿಯಲ್ಲಿ ಬುಧವಾರ ಕೋರ್ಟ್ ವೃತ್ತದ ಬಳಿಯ ಉದ್ಯಾನದಲ್ಲಿಯ ಡಾ.ಅಂಬೇಡ್ಕರ್ ಮೂರ್ತಿಗೆ ತಾಲ್ಲೂಕು ಪಂಚಾಯಿತಿ ಇಒ ಟಿ.ಆರ್. ಮಲ್ಲಾಡದ, ಸಹಾಯಕ ನಿರ್ದೇಶಕ ಗುರುಶಾಂತ ಪಾವಟೆ ಮಾಲಾರ್ಪಣೆ ಮಾಡಿದರು</p></div>

ಹುಕ್ಕೇರಿಯಲ್ಲಿ ಬುಧವಾರ ಕೋರ್ಟ್ ವೃತ್ತದ ಬಳಿಯ ಉದ್ಯಾನದಲ್ಲಿಯ ಡಾ.ಅಂಬೇಡ್ಕರ್ ಮೂರ್ತಿಗೆ ತಾಲ್ಲೂಕು ಪಂಚಾಯಿತಿ ಇಒ ಟಿ.ಆರ್. ಮಲ್ಲಾಡದ, ಸಹಾಯಕ ನಿರ್ದೇಶಕ ಗುರುಶಾಂತ ಪಾವಟೆ ಮಾಲಾರ್ಪಣೆ ಮಾಡಿದರು

   

ಹುಕ್ಕೇರಿ: ‘ದೇಶದ ಸುಭದ್ರತೆಗೆ ಹಾಗೂ ಸದೃಢತೆಗಾಗಿ ಸಂವಿಧಾನದ ಆಶಯ ಈಡೇರಿಸುವಲ್ಲಿ ಎಲ್ಲರೂ ಸಮಭಾವದಿಂದ ಪಾಲ್ಗೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇಒ ಟಿ.ಆರ್. ಮಲ್ಲಾಡದ ಹೇಳಿದರು.

ಬುಧವಾರ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ತಾಲ್ಲೂಕು ಆಡಳಿತ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ‘ಸಂವಿಧಾನ ದಿನಾಚರಣೆ’ ಅಂಗವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ADVERTISEMENT

ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಾನೂಲ್ ತಹಸೀಲ್ದಾರ್, ಉಪವಿಭಾಗ ಮಟ್ಟದ ಎಸ್‌ಸಿಎಸ್‌ಟಿ ಜಾಗೃತ ಮತ್ತು ಉಸ್ತುವಾರಿ ಸದಸ್ಯ ರಮೇಶ್ ಹುಂಜಿ ಮಾತನಾಡಿದರು.

ಕಾನೂನು ವಿದ್ಯಾರ್ಥಿ ಸಾಗರ್, ಉಪನ್ಯಾಸಕ ಆನಂದ ಪಾಟೀಲ್, ನಿವೃತ್ತ ಪ್ರಾಧ್ಯಾಪಕ ಪಿ.ಜಿ. ಕೊಣ್ಣೂರ್ ಉಪನ್ಯಾಸ ನೀಡಿದರು.

ಹುಕ್ಕೇರಿಯಲ್ಲಿ ಬುಧವಾರ ಕೋರ್ಟ್ ವೃತ್ತದ ಬಳಿಯ ಉದ್ಯಾನದಲ್ಲಿಯ ಡಾ.ಅಂಬೇಡ್ಕರ್ ಮೂರ್ತಿ ಎದುರು ಸಂವಿಧಾನ ಪೀಠಿಕೆ ಬೋಧಿಸಲಾಯಿತು

ಪುರಸಭೆ ಮಾಜಿ ಅಧ್ಯಕ್ಷ ಉದಯಕುಮಾರ ಹುಕ್ಕೇರಿ, ಮುಖಂಡ ಕಾಡಪ್ಪ ಹೊಸಮನಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗುರುಶಾಂತ ಪಾವಟೆ, ಪರಿಶಿಷ್ಟ ವರ್ಗ ಇಲಾಖೆಯ ಮಹೇಶ ಭಜಂತ್ರಿ, ಹಿಂದುಳಿದ ವರ್ಗ ಇಲಾಖೆಯ ದೇವಪ್ಪಗೋಳ, ಮುಖ್ಯಾಧಿಕಾರಿ ಈಶ್ವರ ಸಿದ್ನಾಳ, ಟಿಎಚ್ಒ ಡಾ.ಉದಯ ಕುಡಚಿ, ಬಿಇಒ ಪ್ರಭಾವತಿ ಪಾಟೀಲ್, ಎಡಿಎ ಆರ್.ಬಿ. ನಾಯ್ಕರ್, ಎಇಇ ಅರವಿಂದ ಅಣ್ಣಿಗೇರಿ, ಸಿಡಿಪಿಒ ಹೊಳೆಪ್ಪ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಪ್ರಶಾಂತ ಮುನ್ನೋಳಿ, ಪಿಇಒ ಎ.ಐ. ಕೋಟಿವಾಲೆ, ವಿದ್ಯುತ್ ಸಂಘದ ದುರದುಂಡಿ ನಾಯಿಕ ಇದ್ದರು.

ಜಾಥಾ: ಬೆಳಿಗ್ಗೆ 9ಕ್ಕೆ ಪುರಸಭೆಯಿಂದ ವಿವಿಧ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಜಾಥಾ ನಡೆಸಿದರು. ದಾರಿಯುದ್ದಕ್ಕೂ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕುರಿತು ಘೋಷಣೆ ಕೂಗಿದರು. ಕೋರ್ಟ್ ವೃತ್ತದ ಬಳಿಯ ಉದ್ಯಾನಕ್ಕೆ ಬಂದ ಬಳಿಕ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದ ಬಳಿಕ ‘ಎಲ್ಲರಿಗೂ ಸಂವಿಧಾನ ಪೀಠಿಕೆ’ ಬೋಧಿಸಲಾಯಿತು.

ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಜಿಲ್ಲಾ ಜಾಗೃತಿ ಸದಸ್ಯ ಕರೆಪ್ಪ ಗುಡೆನ್ನವರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸವಿತಾ ಹಲಕಿ, ತಾಲ್ಲೂಕು ಅಧಿಕಾರಿಗಳು, ನೂರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಶಿಕ್ಷಕ ಎಸ್.ಎಂ. ಶೆಟ್ಟನ್ನವರ ಸ್ವಾಗತಿಸಿದರು. ಪ್ರಾಚಾರ್ಯ ಸುಭಾಸ ಘಸ್ತಿ ಕಾರ್ಯಕ್ರಮ ನಿರೂಪಿಸಿದರು. ಬಿ.ಆರ್.ಸಿ. ಸಮನ್ವಯಾಧಿಕಾರಿ ಎ.ಎಸ್. ಪದ್ಮನ್ನವರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.