
ಹುಕ್ಕೇರಿ: ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ 2025-26ನೇ ಸಾಲಿಗೆ ಮಕ್ಕಳ ದಾಖಲಾತಿ ಹೆಚ್ಚಿಸಿ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಹೇಳಿದರು.
ತಾಲ್ಲೂಕಿನ ಯಮಕನಮರಡಿ ಕ್ಷೇತ್ರದಲ್ಲಿ ಬರುವ ಎಲ್ಲ ಪ್ರಾಥಮಿಕ ಶಾಲೆಯ 2025-26ನೇ ಸಾಲಿನ ಶಾಲಾ ಪ್ರಾರಂಬೋತ್ಸವದ ಪೂರ್ವ ಭಾವಿ ಸಭೆಯ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು.
ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಬೇಕು. ಈ ವರ್ಷ ಈಗಾಗಲೇ ಪುಸ್ತಕ, ಸಮವಸ್ತ್ರ ಬಂದಿವೆ. ಒಟ್ಟಾಗಿ ಮೇ 30ರಂದು ಶಾಲೆ ಪ್ರಾರಂಭವಾಗಬೇಕು ಎಂದರು.
ಕ್ಷೇತ್ರ್ರ ಸಮನ್ವಯಾಧಿಕಾರಿ ಎ.ಎಸ್.ಪದ್ಮಣ್ಣವರ ಮಾತನಾಡಿ, ಈ ವರ್ಷ ಎಷ್ಟು ದಾಖಲಾತಿ ಆಗುತ್ತವೆ ಅಷ್ಟು ಎಸ್.ಟಿ.ಎಸ್ ನಲ್ಲಿ ದಾಖಲಾತಿ ಇರಬೇಕು ಎಂದರು.
ಮೇ 30ರಂದು ಶಾಲೆ ಪ್ರಾರಂಭವಾಗುವ ಮುಂಚೆ ಅಡುಗೆ ಸಿಬ್ಬಂದಿ ಕರೆಸಿ ಎಲ್ಲ ಪಾತ್ರೆ ಪರಿಕರ ಮತ್ತು ಅಕ್ಕಿ, ಬೇಳೆ, ತರಕಾರಿ ಸ್ವಚ್ಚ ಮಾಡಿಕೊಂಡು ಸಿಹಿ ಊಟದೊಂದಿಗೆ ಶಾಲೆ ಪ್ರಾರಂಭಿಸಿ ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸಹಾಯಕ ನಿರ್ದೇಶಕಿ ಸವಿತಾ ಹಲಕಿ ಮಾತನಾಡಿದರು. ಇದೇ ವೇಳೆ ದೈಹಿಕ ಶಿಕ್ಷಣಾಧಿಕಾರಿ ಎ.ಎ. ಕೋಟಿವಾಲೆ, ಸಂಘದ ಸದಸ್ಯರು, ಬಾಯನ್ನವರ, ಶಿಕ್ಷಣ ಸಂಯೋಜಕ ಪಾರ್ಥನಳ್ಳಿ, ಯಮಕನಮರಡಿ ಕ್ಷೆತ್ರದಲ್ಲಿ ಬರುವ ಎಲ್ಲ ಸಿ.ಆರ್.ಪಿ, ಬಿ.ಆರ್.ಪಿ. ಹಾಗೂ ಅನುದಾನಿತ, ಅನುದಾನ ರಹಿತ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರು ಉಪಸ್ಥಿತರಿದ್ದರು. ಹತ್ತರಗಿ ಸಿ.ಆರ್.ಪಿ ಎಂ.ಬಿ.ಜಿರಲಿ ಸ್ವಾಗತಿಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.