ADVERTISEMENT

ಸಾವರ್ಕರ್‌ ಬಗ್ಗೆ ಮೃದು ಧೋರಣೆ: ಕಾಂಗ್ರೆಸ್ಸಿಗರಿಗೆ ಜ್ಞಾನೋದಯದ ಫಲ– ಶೆಟ್ಟರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 8:50 IST
Last Updated 20 ಡಿಸೆಂಬರ್ 2022, 8:50 IST
   

ಬೆಳಗಾವಿ: ‘ವೀರ ಸಾವರ್ಕರ್‌ ಎಂಥವರು ಎಂದು ಕಾಂಗ್ರೆಸ್‌ ನಾಯಕರು ಈಗ ಓದಿಕೊಂಡಿದ್ದಾರೆ. ಈಗ ಅವರಿಗೆ ಜ್ಞಾನೋದಯವಾಗಿದೆ. ಹೀಗಾಗಿ, ಸುವರ್ಣ ವಿಧಾನಸೌಧದ ವಿಧಾನಸಭಾಂಗಣದಲ್ಲಿ ಸಾವರ್ಕರ್‌ ಭಾವಚಿತ್ರ ಅಳವಡಿಸಿದ ವಿಚಾರದಲ್ಲಿ ಮೃದು ಧೋರಣೆ ತಾಳಿದ್ದಾರೆ’ ಎಂದು ಶಸಕ ಜಗದೀಶ ಶೆಟ್ಟರ ಹೇಳಿದರು.

‘ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಬಗ್ಗೆ ಕಾಂಗ್ರೆಸ್ಸಿಗರು ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ. ಇನ್ನು ಮೇಲೆ ಸಾವರ್ಕರ್‌ ಅವರ ಬಗ್ಗೆ ಏನಾದರೂ ಸಂಶಯಗಳಿದ್ದರೆ ಸದನದಲ್ಲೇ ಬಗೆಹರಿಸಿಕೊಳ್ಳಲಿ. ಇನ್ನು ಮೇಲಾದರೂ ಅವರ ಎಲ್ಲ ನಾಯಕರಿಗೂ ಬುದ್ಧಿ ಬರಲಿ’ ಎಂದು ಅವರು ನಗರದಲ್ಲಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

‘ಸಾವರ್ಕರ್‌ ಸಾಧನೆ ಪಠ್ಯದಲ್ಲಿ ಸೇರಬೇಕೆ ಎಂಬುದರ ಬಗ್ಗೆ ಶಿಕ್ಷಣ ತಜ್ಞರು ನಿರ್ಧಾರ ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಸಾವರ್ಕರ್ ಬಗ್ಗೆ ತಿಳಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ್ದಕ್ಕಾಗಿಯೇ ಅವರಿಗೆ ವೀರ ಎಂಬ ಬಿರುದಾಂಕಿತ ಬಂದಿದೆ’ ಎಂದೂ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.