ADVERTISEMENT

ಆತ್ಮರಕ್ಷಣೆಗಾಗಿ ಕರಾಟೆ ಕಲಿಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:15 IST
Last Updated 1 ಡಿಸೆಂಬರ್ 2019, 13:15 IST
ಬೆಳಗಾವಿಯಲ್ಲಿ ಆನಂದ ಅಕಾಡೆಮಿ ವತಿಯಿಂದ ಕರಾಟೆ ಪಟುಗಳಿಗೆ ವಿವಿಧ ಬೆಲ್ಟ್‌ಗಳನ್ನು ವಿತರಿಸಲಾಯಿತು
ಬೆಳಗಾವಿಯಲ್ಲಿ ಆನಂದ ಅಕಾಡೆಮಿ ವತಿಯಿಂದ ಕರಾಟೆ ಪಟುಗಳಿಗೆ ವಿವಿಧ ಬೆಲ್ಟ್‌ಗಳನ್ನು ವಿತರಿಸಲಾಯಿತು   

ಬೆಳಗಾವಿ: ‘ಕರಾಟೆ ಕೇವಲ ಕ್ರೀಡೆಯಲ್ಲ; ಅದು ಆತ್ಮರಕ್ಷಣೆಯ ಒಂದು ತಂತ್ರ. ಪ್ರತಿಯೊಬ್ಬರೂ ಕಲಿಯುವುದು ಒಳಿತು. ಅದರಲ್ಲೂ ಹೆಣ್ಣು ಮಕ್ಕಳು ನಿರ್ಭೀತಿಯಿಂದ ಓಡಾಡಲು ಈ ಕಲೆ ಸಹಕಾರಿಯಾಗಿದೆ’ ಎಂದು ನಾಗರೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ಇಲ್ಲಿನ ಎಸ್‌ಜಿಬಿಐಟಿಯಲ್ಲಿ ಆನಂದ ಅಕಾಡೆಮಿಯಿಂದ ಭಾನುವಾರ ಆಯೋಜಿಸಿದ್ದ ‘ಕರಾಟೆ ಪಟುಗಳಿಗೆ ಬೆಲ್ಟ್‌ ಹಾಗೂ ಅಭಿನಂದನಾ ಪತ್ರ ವಿತರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕರಾಟೆ ಕಲಿಯುವುದರಿಂದ ದೇಹವು ವ್ಯಾಯಾಮಕ್ಕೊಳಪಡುತ್ತದೆ. ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ’ ಎಂದರು.

ADVERTISEMENT

ಶಿಕ್ಷಣ ಇಲಾಖೆ ನಗರ ವಲಯ ಕ್ಷೇತ್ರ ಸಮನ್ವಯ ಅಧಿಕಾರಿ ಡಾ.ರಾಜಶೇಖರ ಚಳಗೇರಿ ಮಾತನಾಡಿ, ‘ಬಾಲ್ಯದಿಂದಲೇ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡಿ ಅವರನ್ನು ಸದೃಢ ನಾಗರಿಕರನ್ನಾಗಿ ರೂಪಿಸಲು ಸರ್ಕಾರವು ಶಾಲಾ ಹಂತದಲ್ಲಿ ಕರಾಟೆ ತರಬೇತಿ ಕಾರ್ಯಕ್ರಮ ಆರಂಭಿಸಿದೆ’ ಎಂದು ತಿಳಿಸಿದರು.

ಮಾಳಮಾರುತಿ ಠಾಣೆ ಪಿಎಸ್‌ಐ ಹೊಣ್ಣಪ್ಪ ತಳವಾರ ಮಾತನಾಡಿ, ಎಸ್‌.ಎಸ್. ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಪ್ರಾಚಾರ್ಯ ಪ್ರೇಮಾನಂದ ಜಾಧವ ಮಾತನಾಡಿದರು. ಸೈನಿಕ ಕರಾಟೆ ಕೋಚ್ ಪ್ರಸಾದ ರಾಯ್, ಆನಂದ ಅಕಾಡೆಮಿ ಕಾರ್ಯದರ್ಶಿ ಆನಂದ ಪೂಜಾರಿ ಇದ್ದರು.

92 ವಿದ್ಯಾರ್ಥಿಗಳಿಗೆ ವಿವಿಧ ಬೆಲ್ಟ್‌ಗಳನ್ನು ವಿತರಿಸಲಾಯಿತು. ಮಹಾಂತೇಶ ಲೋಟೆ ಸ್ವಾಗತಿಸಿದರು. ರಾಜಶೇಖರ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.