ADVERTISEMENT

ಬೆಂಗಳೂರಿನಿಂದ ‘ವೀರಜ್ಯೋತಿ ಯಾತ್ರೆ’ಗೆ ಚಾಲನೆ: ಬಾಬಾಸಾಹೇಬ ಪಾಟೀಲ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 13:44 IST
Last Updated 6 ಅಕ್ಟೋಬರ್ 2025, 13:44 IST
ಬಾಬಾಸಾಹೇಬ ಪಾಟೀಲ
ಬಾಬಾಸಾಹೇಬ ಪಾಟೀಲ   

ಚನ್ನಮ್ಮನ ಕಿತ್ತೂರು(ಬೆಳಗಾವಿ ಜಿಲ್ಲೆ): ‘ಇಲ್ಲಿನ ಕೋಟೆ ಆವರಣದಲ್ಲಿ ಅ.23ರಿಂದ 25ರವರೆಗೆ ನಡೆಯಲಿರುವ ಕಿತ್ತೂರು ಉತ್ಸವದ ಅಂಗವಾಗಿ ಹೊರಡುವ ವೀರಜ್ಯೋತಿ ಯಾತ್ರೆಗೆ ಮುಂದಿನ ವಾರ ಬೆಂಗಳೂರಿನ ವಿಧಾನಸೌಧದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ತಿಳಿಸಿದರು.

‘ಅ.13 ಅಥವಾ 14ರಂದು ಮುಖ್ಯಮಂತ್ರಿ ಯಾತ್ರೆಗೆ ಚಾಲನೆ ನೀಡುವರು. ಅಲ್ಲಿಂದ ವಿವಿಧ ಜಿಲ್ಲೆಗಳಿಗೆ ಯಾತ್ರೆ ಸಾಗಿ, ಕಿತ್ತೂರು ಕರ್ನಾಟಕದ ವ್ಯಾಪ್ತಿಯಲ್ಲಿ ಸಂಚರಿಸಿ ಅ.22ರಂದು ಸಂಜೆ ಕಿತ್ತೂರಿಗೆ ಆಗಮಿಸಲಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

₹1.2 ಕೋಟಿ ಬಾಕಿ

ADVERTISEMENT

‘2024-25ನೇ ಸಾಲಿನಲ್ಲಿ ಗುತ್ತಿಗೆದಾರರು ಸೇರಿ ವಿವಿಧ ಇಲಾಖೆಗಳು ವ್ಯಯಿಸಿದ್ದ ₹1.2 ಕೋಟಿಯನ್ನು ಉತ್ಸವ ಸಮಿತಿ ಬಾಕಿ ಉಳಿಸಿಕೊಂಡಿದೆ’ ಎಂದು ಮೂಲಗಳು ತಿಳಿಸಿವೆ.

‘ಈ ಬಾರಿ ಉತ್ಸವ ಆಚರಣೆಗೆ ₹5 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ಹಿಂದಿನ ಉತ್ಸವದ ಬಾಕಿ ಮೊತ್ತ ಪಾವತಿಸುತ್ತೇವೆ. ಉಳಿದ ದುಡ್ಡಿನಲ್ಲಿ ಅದ್ದೂರಿಯಾಗಿ ಉತ್ಸವ ಆಚರಿಸುತ್ತೇವೆ’ ಎಂದು ಬಾಬಾಸಾಹೇಬ ಪಾಟೀಲ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.