ADVERTISEMENT

ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಚುನಾವಣೆ: ಸವದಿ, ಕಾಗೆ ಬಣ ಮೈಲುಗೈ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 2:13 IST
Last Updated 27 ಅಕ್ಟೋಬರ್ 2025, 2:13 IST
ಅಥಣಿಯ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಬಣದವರು ಮೈಲುಗೈ ಸಾಧಿಸಿದ ಅಂಗವಾಗಿ ವಿಜಯೋತ್ಸವ ಆಚರಿಸಿದರು
ಅಥಣಿಯ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಬಣದವರು ಮೈಲುಗೈ ಸಾಧಿಸಿದ ಅಂಗವಾಗಿ ವಿಜಯೋತ್ಸವ ಆಚರಿಸಿದರು   

ಅಥಣಿ: ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಚುನಾವಣೆ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಶಾಸಕ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಬಣ ಮೈಲುಗೈ ಸಾಧಿಸಿದೆ.

ಮಾಜಿ ಶಾಸಕ ಮಹೇಶ ಕುಮಠಳ್ಳಿ ಹಾಗೂ ಲಕ್ಷ್ಮಣ ಸವದಿ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿತ್ತು, ಕೊನೆಗೂ ಫಲಿತಾಂಶ ಪ್ರಕಟಗೊಂಡಿದ್ದು ಸವದಿ ಬಣ ಭರ್ಜರಿಯಾಗಿ ಮೈಲುಗೈ ಸಾಧಿಸಿದ್ದಾರೆ.

ಲಕ್ಷ್ಮಣ ಸವದಿ ಬೆಂಬಲಿತ ಸಂಪೂರ್ಣ ಪ್ಯಾನೆಲ್‌ನ 12 ಜನ ಅಭ್ಯರ್ಥಿಗಳು ಮೈಲುಗೈ ಸಾಧಿಸಿದ್ದಾರೆ.  ಚುನಾವಣಾ ಪೂರ್ವದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದ ರಮೇಶ್‌ ಜಾರಕಿಹೊಳಿ ಬಣಕ್ಕೆ ಮುಖಭಂಗವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.