ಅರುಣ ಕೋಪರ್ಡೆ ಮತ್ತು ಮಹಾದೇವಿ ಬಾವನೂರ
ಬೆಳಗಾವಿ: ಮಹಾಕುಂಭ ಮೇಳದಲ್ಲಿ ಮೃತಪಟ್ಟ ಬೆಳಗಾವಿಯ ನಾಲ್ವರ ಪೈಕಿ ಇಬ್ಬರ ದೇಹಗಳನ್ನು ದೆಹಲಿಯಿಂದ ನೇರವಾಗಿ ಬೆಳಗಾವಿಗೆ ಏರ್ ಲಿಫ್ಟ್ ಮಾಡಲಾಗುವುದು. ಇನ್ನಿಬ್ಬರ ಶವಗಳನ್ನು ದೆಹಲಿಯಿಂದ ಗೋವಾಗೆ ಏರ್ ಲಿಫ್ಟ್ ಮಾಡಿ, ಅಲ್ಲಿಂದ ಬೆಳಗಾವಿಗೆ ಆಂಬುಲೆನ್ಸ್ ಮೂಲಕ ತರಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ಮಹಾದೇವಿ ಬಾವನೂರ ಹಾಗೂ ಅರುಣ ಕೋಪರ್ಡೆ ಅವರ ಶವಗಳು ಸರಿಯಾದ ಸಮಯಕ್ಕೆ ದೆಹಲಿಗೆ ತಲುಪಿವೆ. ಹೀಗಾಗಿ ಮಧ್ಯಾಹ್ನದ ವಿಮಾನದಲ್ಲಿ ದೆಹಲಿಯಿಂದ ನೇರವಾಗಿ ಬೆಳಗಾವಿಗೆ ತರಲಾಗುತ್ತಿದೆ. 3.20ಕ್ಕೆ ವಿಮಾನ ದೆಹಲಿಯಿಂದ ಹಾರಿದ್ದು, ಸಂಜೆ 5.30ರವರೆಗೆ ಬೆಳಗಾವಿ ತಲುಪಲಿದೆ.
ಜ್ಯೋತಿ ಹತ್ತರವಾಟ ಹಾಗೂ ಅವರ ಪುತ್ರಿ ಮೇಘಾ ಅವರ ಶವಗಳು ತಡವಾಗಿ ದೆಹಲಿ ತಲುಪಿದವು.ದೆಹಲಿಯಿಂದ ಗೋವಾಗೆ ಸಂಜೆ 6ಕ್ಕೆ ಇನ್ನೊಂದು ವಿಮಾನ ಹಾರಲಿದೆ. ತಾಯಿ, ಮಗಳ ಶವಗಳನ್ನು ಅದರಲ್ಲಿ ಗೋವಾವರೆಗೆ ವಿಮಾನದ ಮೂಲಕ ತಂದು, ಅಲ್ಲಿಂದ ಆಂಬುಲೆನ್ಸ್ ಮೂಲಕ ಬೆಳಗಾವಿಗೆ ತರಲಾಗುವುದು ಎಂದರು.
ರಾತ್ರಿ 8.30 ಕ್ಕೆ ಗೋವಾದಿಂದ ರಸ್ತೆ ಮಾರ್ಗವಾಗಿ ಬೆಳಗಾವಿಗೆ ಬರಲಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.