ಖಾನಾಪುರ: ತಾಲ್ಲೂಕಿನ ಲಿಂಗನಮಠ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಂಘದ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ ಎಂದು ಸಂಘದ ಚುನಾವಣಾಧಿಕಾರಿ ಆರ್. ಬಿ. ಪಾಟೀಲ ಘೋಷಿಸಿದರು.
ಸಂಘದ ಕಚೇರಿಯಲ್ಲಿ ನೂತನ ನಿರ್ದೇಶಕರಿಗೆ ಬುಧವಾರ ಅವರು ಪ್ರಮಾಣಪತ್ರ ವಿತರಿಸಿದರು.
ನೂತನ ನಿರ್ದೇಶಕರಾಗಿ ಲಿಂಗನಮಠ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಸೀಂ ಹಟ್ಟಿಹೊಳಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಶ್ರೀಶೈಲ ಮಾಟೊಳ್ಳಿ, ಅಶೋಕ ಕಾಕತಕರ, ಪ್ರಕಾಶ ಬಿಜಾಪುರ, ದಶರಥ ಪಾಟೀಲ, ಮೈಕಲ ಫನಾರ್ಂಡಿಸ್, ಪಾಂಡುರಂಗ ಮೀಟಗಾರ, ಸುರೇಖಾ ಅಂಬಡಗಟ್ಟಿ, ಸರೋಜಾ ಬಾಗೇವಾಡಿ, ಕಲ್ಲಪ್ಪ ಸಂಗೊಳ್ಳಿ, ಬಸಪ್ಪ ಸತ್ಯನವರ ಹಾಗೂ ಸಂಗಮೇಶ ಪಾಟೀಲ ಆಯ್ಕೆಯಾಗಿದ್ದಾರೆ.
ಬಾಬು ಅಂಬಡಗಟ್ಟಿ, ಮಹಾಂತೇಶ ಕಿತ್ತೂರ, ಅಶೋಕ ಮಾಟೊಳ್ಳಿ ಬಸಪ್ಪ ಬೋಗುರ, ಬಾಳಯ್ಯ ಅಲ್ಲಯ್ಯನವರಮಠ, ಶಿವಾನಂದ ಗೋಧೊಳ್ಳಿ, ಬಸವರಾಜ ನಾಯಕ, ಬಸಲಿಂಗಪ್ಪ ಬಿಜಾಪುರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.