ADVERTISEMENT

ಕುಂಭಮೇಳ: ಕಾಲ್ತುಳಿತದಲ್ಲಿ ಬೆಳಗಾವಿಯ ಇಬ್ಬರು ಬಾಲಕಿಯರು,ಇಬ್ಬರು ಮಹಿಳೆಯರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 29 ಜನವರಿ 2025, 5:06 IST
Last Updated 29 ಜನವರಿ 2025, 5:06 IST
<div class="paragraphs"><p>ಕಾಂಚನ್ ಕೋಪಾರ್ಡೆ,&nbsp;ಸರೋಜಿನಿ ನಡುವಿನಹಳ್ಳಿ</p></div>

ಕಾಂಚನ್ ಕೋಪಾರ್ಡೆ, ಸರೋಜಿನಿ ನಡುವಿನಹಳ್ಳಿ

   

ಬೆಳಗಾವಿ: ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ‌ ಬೆಳಗಾವಿಯ ಇಬ್ಬರು ಬಿಜೆಪಿ ಕಾರ್ಯಕರ್ತೆಯರು‌ ಹಾಗೂ ಇಬ್ಬರು ಬಾಲಕಿಯರು ಗಾಯಗೊಂಡಿದ್ದಾರೆ.

ಇಲ್ಲಿನ ವಡಗಾವಿಯ‌ ನಿವಾಸಿ ಸರೋಜಿನಿ ನಡುವಿನಹಳ್ಳಿ‌ ಹಾಗೂ ಕಾಂಚನ್ ಕೋಪಾರ್ಡೆ‌ಗೆ ಗಾಯಗೊಂಡ ಬಿಜೆಪಿ ಕಾರ್ಯಕರ್ತೆಯರು. ಅವರೊಂದಿಗೇ ಇದ್ದ ಬಾಲಕಿಯರಾದ ಮೇಘಾ, ಜ್ಯೋತಿ ಅವರಿಗೂ ಗಾಯಗಳಾಗಿವೆ.

ADVERTISEMENT

ಮೂರು ದಿನಗಳ ಹಿಂದೆ ಎಲ್ಲರೂ ಪ್ರಯಾಗ್‌‌ರಾಜ್‌ಗೆ ತೆರಳಿದ್ದರು.

ಅಲ್ಲಿನ ವೈದ್ಯರಿಂದ ನಾಲ್ವರಿಗೂ ಚಿಕಿತ್ಸೆ ನೀಡಲಾಗಿದೆ. ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ಸಂಬಂಧಿಕರಿಗೆ ಬಂದಿದೆ.

ಬೆಳಗಾವಿಯ ಸುಮಾರು 500ಕ್ಕೂ ಹೆಚ್ಚು ಯಾತ್ರಾರ್ಥಿಗಳು ಮಹಾ ಕುಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.