
ಕಾಗವಾಡ: ಮರಾಠಾ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಮಾತ್ರ ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮುಂದೆ ಬರಲು ಸಾಧ್ಯವಿದೆ. ದೇಶದಲ್ಲಿನ ಅತ್ಯಂತ ಕಟ್ಟ ಕಡೆಯ ಸ್ಥಾನದಲ್ಲಿ ಮರಾಠಾ ಸಮುದಾಯವಿದ್ದು ಇದನ್ನು ಮೇಲೆತ್ತಲು ಸಂಘಟನೆಯ ಅವಶ್ಯಕತೆ ಇದೆ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ತಾಲ್ಲೂಕಿನ ಕೆಂಪವಾಡದ ಅಥಣಿ ಶುಗರ್ಸ್ ಕಾರ್ಖಾನೆಯ ಆವರಣದಲ್ಲಿ ನಡೆದ ಮರಾಠಾ ಸಮಾಜದ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದರು.
ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ. ಇತಿಹಾಸವನ್ನು ತಿರುಚಿ ಮರಾಠಾ ಸಮಾಜದ ಯುವಕರ ದಾರಿ ತಪ್ಪಿಸುತ್ತಿರುವವರ ಮಾತನ್ನು ನಂಬಬೇಡಿ ಇಂದು ನಮ್ಮ ಸಮಾಜದಲ್ಲಿ ಒಕ್ಕಟ್ಟಿನ ಕೊರತೆಯಿಂದಾಗಿ ಸಾಕಷ್ಟು ಹಿಂದಿದೆ. ಇಲ್ಲಿಯವರೆಗೆ ಬಂದಿರುವ ಯಾವುದೇ ಸರ್ಕಾರ ಮರಾಠಾ ಸಮಾಜಕ್ಕೆ ವಿಶೇಷವಾದುದನ್ನು ಏನನ್ನೂ ಮಾಡಿಲ್ಲ ಎಂದು ಹೇಳಿದರು.
ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ಮರಾಠಾ ಸಮುದಾಯ ಒಗ್ಗೂಡಿದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ನಾವು ಸ್ವಾಭಿಮಾನದಿಂದಲೆ ಬದುಕಬೇಕಿದೆ ಸಮಾಜದ ಇಂದಿನ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಇದಕ್ಕೆ ನಮ್ಮಲ್ಲಿನ ಭಿನ್ನಾಭಿಪ್ರಾಯಗಳೇ ಕಾರಣ. ಆದ್ದರಿಂದ ನಾವೆಲ್ಲರೂ ಪಕ್ಷಾತೀತವಾಗಿ ಒಂದಾದರೆ ಮಾತ್ರ ರಾಜಕೀಯವಾಗಿ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಿದೆ ಎಂದರು.
ಮಾಜಿ ಸಚಿವ ಶ್ರೀಮಂತ ಪಾಟೀಲ, ಮುಖಂಡರಾದ ಅಪ್ಪಾಸಾಬ ಅವತಾಡೆ, ದಿಗ್ವಿಜಯಸಿಂಗ ಪವಾರ-ದೇಸಾಯಿ, ಡಾ.ರಾಹುಲ ಭೋಸಲೆ, ಅಣ್ಣಾಸಾಹೇಬ ಪವಾರ,ವಿಕ್ರಾಂತ ಭೋಸಲೆ,ಆರ್.ಎಂ. ಪಾಟೀಲ,ನಾನಾಸಾಬ ಅವತಾಡೆ, ಭಾಹುಸಾಬ ಜಾಧವ, ಸಿದ್ದು ಪಾಟೀಲ, ಸಂದೀಪ ಪಾಟೀಲ, ಸುಧಾಕರ ಭಗತ, ಸಂಭಾಜಿ ಪಾಟೀಲ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.