ADVERTISEMENT

ಬೆಳಗಾವಿ|ಎಂಇಎಸ್‌ನಿಂದ ಕರಾಳ‌ ದಿನ ಆಚರಣೆ: ನಾಡವಿರೋಧಿ ಘೋಷಣೆ ಕೂಗಿದ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:33 IST
Last Updated 1 ನವೆಂಬರ್ 2025, 5:33 IST
   

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯವರು ನಗರದಲ್ಲಿ ಶನಿವಾರ ಕರಾಳ ದಿನ ಆಚರಿಸಿದರು. ನಾಡವಿರೋಧಿ ಘೋಷಣೆ ಕೂಗಿದರು.

ಇಲ್ಲಿನ ಮಹಾದ್ವಾರ ರಸ್ತೆಯ ಸಂಭಾಜಿ ವೃತ್ತದಿಂದ ಮೆರವಣಿಗೆ ಆರಂಭವಾಗಿದ್ದು, ಕಪಿಲೇಶ್ವರ ಮೇಲ್ಸೇತುವೆ, ಪಾಟೀಲ ಗಲ್ಲಿಯ ಶನಿ ಮಂದಿರ, ಮುಖ್ಯ ಅಂಚೆ‌ ಕಚೇರಿ ಮಾರ್ಗವಾಗಿ ಸಾಗುತ್ತಿದೆ.

ವಿವಿಧ ಮಾರ್ಗಗಳಲ್ಲಿ ಸಾಗಿ ರೈಲ್ವೆ ಮೇಲ್ಸೇತುವೆ ಬಳಿಯ ಮರಾಠ ಮಂದಿರ ತಲುಪಿದ ನಂತರ ಸಭೆ ನಡೆಸಲಿದ್ದಾರೆ. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.