
ಮುನವಳ್ಳಿ: ‘ಸಾಹಿತ್ಯ ಕ್ಷೇತ್ರಕ್ಕೆ ಮಿತಿ ಇಲ್ಲ. ಮುನವಳ್ಳಿ ಪಟ್ಟಣವು ಸಾಹಿತ್ಯದ ರಸಬಳ್ಳಿಯಂತಿದೆ. ಪ್ರತಿ ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಸಾಹಿತ್ಯಾತ್ಮಕ ಚಟುವಟಿಕೆಗಳಿಗೆ ಅವಕಾಶ ನೀಡಿ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಯತ್ತ ಎಲ್ಲರೂ ಸಾಗಬೇಕಿದೆ’ ಎಂದು ಸಾಹಿತಿ ಬಸು ಬೇವಿನಗಿಡದ ಹೇಳಿದರು.
ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ ಸವದತ್ತಿ ತಾಲ್ಲೂಕು ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಪಟ್ಟಣದಲ್ಲಿ ಸಾಕಷ್ಟು ಸಾಹಿತ್ಯಾಸಕ್ತರು ಮತ್ತು ಸಾಹಿತಿಗಳಿರುವುದರಿಂದ ಇಲ್ಲೊಂದು ಸಾಹಿತ್ಯಭವನ ನಿರ್ಮಾಣ ಅವಶ್ಯ’ ಎಂದರು.
ಸಮಾರಂಭ ಉದ್ಘಾಟಿಸಿದ ಅಶ್ವತ ವೈದ್ಯ, ‘ಮಾತು, ಭಾಷೆ, ಶಿಕ್ಷಣ ಎಲ್ಲವೂ ಕನ್ನಡವಾಗಿರಬೇಕು’ ಎಂದರು.
ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸಾನ್ನಿಧ್ಯವಹಿಸಿ, ‘ಶತಮಾನಗಳಿಂದಲೂ ಮಠ ಮಾನ್ಯಗಳು ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗೆ ಪ್ರೇರಣೆ ನೀಡುತ್ತ ಬಂದಿವೆ. ಕನ್ನಡಕ್ಕೆ ವಿಶೇಷ ಸ್ಥಾನಮಾನವಿದ್ದು, ಉತ್ತರ ಭಾರತದಲ್ಲಿಯೂ ಕನ್ನಡದ ಶಿಲಾ ಶಾಸನಗಳು ಕಂಡುಬಂದಿವೆ’ ಎಂದರು.
ಉಮೇಶ ಬಾಳಿ ವಿವಿಧ ಪುಸ್ತಕ ಬಿಡುಗಡೆ ಮಾಡಿದರು. ಕ.ಸಾ.ಪ ಜಿಲ್ಲಾ ಅಧ್ಯಕ್ಷರಾದ ಮಂಗಲಾ ಮೆಟಗುಡ್ಡ, ವೈ.ಎಂ.ಯಾಕೊಳ್ಳಿ ಮಾತನಾಡಿದರು.
ಸೋಮಶೇಖರ ಮಠದ ಮುರುಘೇಂದ್ರ ಶ್ರೀ, ರವೀಂದ್ರ ಯಲಿಗಾರ, ಎಂ.ಆರ್.ಗೋಪಶೆಟ್ಟಿ, ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಎ.ಪಿ.ಎಂ.ಸಿ ಅಧ್ಯಕ್ಷ ಚಂದ್ರು ಜಂಬ್ರಿ, ಮಹಾಬಳೇಶ್ವರ ಪುರದಗುಡಿ, ವೀರೇಶ ಬ್ಯಾಹಟ್ಟಿ, ಸದಾಶಿವ ಕೌಜಲಗಿ, ಬಿ.ಎನ್. ಪ್ರಭುನವರ, ಚಂದ್ರು ಶಾಮರಾಯನವರ, ಪುಂಡಲಿಕ ಬಾಳೋಜಿ, ಟಿ.ಪಿ. ಮನೋಳಿ, ಚಂದ್ರು ಮುಚ್ಚಂಡಿ, ಅಂಬರೀಶ ಯಲಿಗಾರ, ಡಿ.ಡಿ. ಟೋಪೋಜಿ, ಶಿಕ್ಷಣ ಅಧಿಕಾರಿ ಎ.ಎ.ಖಾಜಿ, ಶ್ರೀಪಾದ ಸಬ್ನೀಸ್, ಪುರಸಭೆ ಅಧ್ಯಕ್ಷ ಈಶ್ವರ ಕರಿಕಟ್ಟಿ, ಅನ್ನಪೂರ್ಣ ಲಂಬೂನವರ, ಬಾಳು ಹೊಸಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.