ADVERTISEMENT

ತೆಲಸಂಗ: ಸಂಭ್ರಮದ ನಾಗರಪಂಚಮಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 14:46 IST
Last Updated 13 ಆಗಸ್ಟ್ 2021, 14:46 IST
ತೆಲಸಂಗ ಗ್ರಾಮಸ್ಥರು ನಾಗರ ಪಂಚಮಿ ನಿಮಿತ್ತ ಅಗಸಿಯಲ್ಲಿ ಪ್ರತಿಷ್ಠಾಪಿಸಿದ್ದ ನಾಗರಮೂರ್ತಿಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು
ತೆಲಸಂಗ ಗ್ರಾಮಸ್ಥರು ನಾಗರ ಪಂಚಮಿ ನಿಮಿತ್ತ ಅಗಸಿಯಲ್ಲಿ ಪ್ರತಿಷ್ಠಾಪಿಸಿದ್ದ ನಾಗರಮೂರ್ತಿಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು   

ತೆಲಸಂಗ: ಗ್ರಾಮಸ್ಥರು ನಾಗರಪಂಚಮಿಯನ್ನು ಸಡಗರ–ಸಂಭ್ರಮದಿಂದ ಶುಕ್ರವಾರ ಆಚರಿಸಿದರು.

ಪದ್ದತಿಯಂತೆ ಕುಂಬಾರರ ಮನೆಯಿಂದ ನಾಗರಮೂರ್ತಿಯನ್ನು ಬೆಳಿಗ್ಗೆ ತಂದು ಗ್ರಾಮದ ಅಗಸಿಯಲ್ಲಿ ಪ್ರತಿಷ್ಠಾಪಿಸಲಾಯಿತು. ವಾಡಿಕೆಯಂತೆ ಗ್ರಾಮದ ಶೆಲೆಪ್ಪಗೋಳ ಮನೆತನದವರಿಂದ ಮೊದಲ ಪೂಜೆ ನೆರವೇರಿತು. ಕೋವಿಡ್ ನಿರ್ಮೂಲನೆಗಾಗಿ ಮತ್ತು ರೈತ ಕಲ್ಯಾಣಕ್ಕಾಗಿ ವಿಶೇಷ ಪೂಜೆ ಮಾಡಲಾಯಿತು. ನಂತರ ಗ್ರಾಮದವರೆಲ್ಲರೂ ಪೂಜೆ ಸಲ್ಲಿಸಿದರು.

ಹೆಣ್ಣುಮಕ್ಕಳು ತಂಡೋಪತಂಡವಾಗಿ ಬಂದು ಪೂಜೆ ಸಲ್ಲಿಸಿದರು. ಮುಖಂಡರಾದ ಶ್ರೀಶೈಲ ಶೆಲ್ಲೆಪ್ಪಗೋಳ, ಗ್ರಾಪಂ ಸದಸ್ಯ ಕಾಸಪ್ಪ, ಭೀಮಪ್ಪ ಶೆಲ್ಲೆಪ್ಪಗೋಳ, ಗೋಪಾಲ ಶೆಲ್ಲೆಪ್ಪಗೋಳ, ಸಂಗಪ್ಪ ಶೆಲ್ಲೆಪ್ಪಗೋಳ, ವಿಠಲ ಶೆಲ್ಲೆಪ್ಪಗೋಳ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.