ADVERTISEMENT

ಬೈಲಹೊಂಗಲ: ನೂತನ ಡಿವೈಎಸ್ಪಿ ವೀರಯ್ಯ ಹಿರೇಮಠ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 14:12 IST
Last Updated 22 ಏಪ್ರಿಲ್ 2025, 14:12 IST
ಬೈಲಹೊಂಗಲ ನೂತನ ಡಿವೈಎಸ್ಪಿ ಆಗಿ ಡಾ.ವೀರಯ್ಯ ಹಿರೇಮಠ (ಬಲಗಡೆ) ಸೋಮವಾರ ಅಧಿಕಾರ ಸ್ವೀಕರಿಸಿದರು
ಬೈಲಹೊಂಗಲ ನೂತನ ಡಿವೈಎಸ್ಪಿ ಆಗಿ ಡಾ.ವೀರಯ್ಯ ಹಿರೇಮಠ (ಬಲಗಡೆ) ಸೋಮವಾರ ಅಧಿಕಾರ ಸ್ವೀಕರಿಸಿದರು   

ಬೈಲಹೊಂಗಲ: ಬೈಲಹೊಂಗಲ ಪೊಲೀಸ್ ಉಪವಿಭಾಗದ ನೂತನ ಡಿವೈಎಸ್ಪಿ ಆಗಿ ಡಾ.ವೀರಯ್ಯ ಹಿರೇಮಠ ಸೋಮವಾರ ಅಧಿಕಾರ ವಹಿಸಿಕೊಂಡರು. ನಿಕಟಪೂರ್ವ ಡಿವೈಎಸ್ಪಿ ರವಿ ನಾಯ್ಕ ಅವರು ಹೂಗುಚ್ಛ ನೀಡಿ ಅಧಿಕಾರ ಹಸ್ತಾಂತರಿಸಿದರು.

ವೀರಯ್ಯ ಅವರು ಪೊಲೀಸ್ ಪ್ರಧಾನ ಕಚೇರಿ ಕಾನೂನು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ವೀರಯ್ಯ ಹಿರೇಮಠ, ‘ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗೂಂಡಾಗಿರಿ ಮಾಡುವವರ ಮೇಲೆ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಲಾಗುವುದು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.