ADVERTISEMENT

‘ವಿದ್ಯುತ್ ಬಿಲ್ ಕಟ್ಟುವುದಿಲ್ಲ‘ ಎಂದು ಹಟ ಹಿಡಿದ ವೀರಾಪುರ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 25 ಮೇ 2023, 5:04 IST
Last Updated 25 ಮೇ 2023, 5:04 IST
ದುಡ್ಡು ಕಟ್ಟುವುದಿಲ್ಲ ಎಂದು ಹೆಸ್ಕಾಂ ನೌಕರ ಮುಂದೆ ಹೇಳುತ್ತಿರುವ ಗ್ರಾಮಸ್ಥರು
ದುಡ್ಡು ಕಟ್ಟುವುದಿಲ್ಲ ಎಂದು ಹೆಸ್ಕಾಂ ನೌಕರ ಮುಂದೆ ಹೇಳುತ್ತಿರುವ ಗ್ರಾಮಸ್ಥರು   

ಕಿತ್ತೂರು: ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ, ಹಾಗಾಗಿ ನಾವು ವಿದ್ಯುತ್‌ ಬಿಲ್ ಪಾವತಿ ಮಾಡುವುದಿಲ್ಲ’ ಎಂದು ತಾಲ್ಲೂಕಿನ ವೀರಾಪುರ ಗ್ರಾಮಸ್ಥರು ಹೇಳಿದ್ದಾರೆ.

ಹೆಸ್ಕಾಂ ಬಿಲ್ ಕಲೆಕ್ಟರ್ ಮಂಗಳವಾರ ದುಡ್ಡು ಕಟ್ಟಿಸಿಕೊಳ್ಳಲು ಊರಿಗೆ ಬಂದಾಗ ಈ ಘಟನೆ ನಡೆದಿದೆ. ಇಲೆಕ್ಟ್ರಾನಿಕ್ ಬಿಲ್ಲಿಂಗ್ ಮಷಿನ್ ತೆಗೆದು ಬಿಲ್ ಪಾವತಿ ಮಾಡಿಸಿಕೊಳ್ಳಲು ನೌಕರ ನಿಂತಾಗ ಗ್ರಾಮಸ್ಥರಾದ ಬಸನಗೌಡ ಇಟಗಿ ಮತ್ತು ಮಂಜುನಾಥ ಸಂಪಗಾಂವಿ ವಿರೋಧ ವ್ಯಕ್ತಪಡಿಸಿದ್ದಾರೆ.

‘ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ನೌಕರ ತಿಳಿ ಹೇಳಿದ್ದಾರೆ. ಮಳೆ ಇಲ್ಲ, ಬೆಳೆಯೂ ಸರಿಯಾಗಿ ಬಂದಿಲ್ಲ. ವಿದ್ಯುತ್‌ ಉಚಿತವಾಗಿ ಪೂರೈಸುವುದಾಗಿ ಘೋಷಣೆ ಮಾಡಿದ ಸರ್ಕಾರವೇ ಅಧಿಕಾರಕ್ಕೆ ಬಂದಿದೆ. ನಾವಂತೂ ಬಿಲ್ ಕಟ್ಟುವುದಿಲ್ಲ’ ಎಂದೂ ಹೆಸ್ಕಾಂದವರಿಗೆ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.