ADVERTISEMENT

ಕೌಜಲಗಿ: ಯಲ್ಲಮ್ಮದೇವಿ ದೇವಸ್ಥಾನಕ್ಕೆ ಭಕ್ತರಿಂದ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2025, 16:14 IST
Last Updated 17 ಫೆಬ್ರುವರಿ 2025, 16:14 IST
ಕೌಜಲಗಿ ಸಮೀಪದ ಬೆಟಗೇರಿ ಗ್ರಾಮದ ಯಲ್ಲಮ್ಮದೇವಿ ಭಕ್ತರು ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕಾಗಿ ಎತ್ತಿನಗಾಡಿ, ಕಾಲ್ನಡಿಗೆ ಮೂಲಕ ಪ್ರಯಾಣ ಬೆಳೆಸಿದರು
ಕೌಜಲಗಿ ಸಮೀಪದ ಬೆಟಗೇರಿ ಗ್ರಾಮದ ಯಲ್ಲಮ್ಮದೇವಿ ಭಕ್ತರು ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕಾಗಿ ಎತ್ತಿನಗಾಡಿ, ಕಾಲ್ನಡಿಗೆ ಮೂಲಕ ಪ್ರಯಾಣ ಬೆಳೆಸಿದರು   

ಕೌಜಲಗಿ: ಸಮೀಪದ ಬೆಟಗೇರಿ ಗ್ರಾಮದ ಸವದತ್ತಿ ಯಲ್ಲಮ್ಮ ದೇವಿಯ ನೂರಾರು ಜನ ಭಕ್ತರು ಎತ್ತಿನ ಗಾಡಿ ಹೊಡೆದುಕೊಂಡು ಪಾದಯಾತ್ರೆ ಮೂಲಕ ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕಾಗಿ ತೆರಳುವ ಕಾರ್ಯಕ್ರಮ ಭಾನುವಾರ ಸಡಗರದಿಂದ ನಡೆಯಿತು.

ಪ್ರತಿ ವರ್ಷದ ಸಂಪ್ರದಾಯದಂತೆ ಈ ವರ್ಷವೂ ಕೂಡಾ ಊರಿನ ಹಲವು ಕುಟುಂಬಗಳು ಚಕ್ಕಡಿ, ಎತ್ತುಗಳನ್ನು ಶೃಂಗರಿಸಿ, ಯಲ್ಲಮ್ಮ ದೇವಿ ಕೃರ್ತ ಗದ್ಗುಗೆಯನ್ನು ಇಲ್ಲಿಯ ಯಲ್ಲಮ್ಮ ದೇವಿಯ ಅರ್ಚಕರ, ಆರಾಧಕ ಮಹಿಳೆಯರು ತಲೆಯ ಮೇಲೆ ಶ್ರೀದೇವಿಯ ಜಗಹೊತ್ತು ಊಧೋ..ಊಧೋ..ಊಧೋ.. ಯಲ್ಲಮ್ಮ ನಿನ್ನ ಹಾಲು ಕೂಧೋ... ಎನ್ನುತ್ತಾ ಸಕಲ ವಾದ್ಯ ಮೇಳಗಳೊಂದಿಗೆ ಶ್ರೀದೇವಿಯ ದರ್ಶನಕ್ಕೆ ಕಾಲ್ನಡಿಗೆ ಮೂಲಕ ಪ್ರಯಾಣ ಬೆಳಸಿದರು.

8ರ ಮಂಗಳವಾರ ಯಲ್ಲಮ್ಮದೇವಿ ದೇವಸ್ಥಾನದ ಗುಡ್ಡದಲ್ಲಿ ಸ್ಥಳೀಯ ಗ್ರಾಮಸ್ಥರು, ಯಲ್ಲಮ್ಮದೇವಿ ಭಕ್ತರು, ಯಲ್ಲಮ್ಮದೇವಿಯ ಪೂಜೆ, ಉಡಿ ತುಂಬುವ, ದೇವಿಯ ಆರಾಧಕರಿಂದ ಹಡಲಗಿ ತುಂಬುವ, ನೈವೇದ್ಯ ಸಮರ್ಪಿಸುವ ಹಾಗೂ ಹರಕೆ ಸಲ್ಲಿಸುವ ಕಾರ್ಯಕ್ರಮ ನಡೆದು, ಸವದತ್ತಿ ದೇವಸ್ಥಾನದಿಂದ 19ರಂದು ಹೊರಟು 20ರಂದು ಬೆಟಗೇರಿ ಗ್ರಾಮಕ್ಕೆ ಮರಳಿ ಬರಲಾಗುವುದು ಎಂದು ಗ್ರಾಮದ ಪಾದಯಾತ್ರಿಕರು ತಿಳಿಸಿದರು.

ADVERTISEMENT

ಸ್ಥಳೀಯ ಹಿರಿಯರಾದ ಮುದಕಪ್ಪ ರಾಮಗೇರಿ, ಲಕ್ಷ್ಮಣ ಚಿನ್ನನ್ನವರ, ವೀರಭದ್ರ ನೀಲಣ್ಣವರ, ಬಸಪ್ಪ ಮುರಗೋಡ, ರಾಮಣ್ಣ ಚಿನ್ನನ್ನವರ, ದುಂಡಪ್ಪ ಹಾಲನ್ನವರ, ಮುತ್ತೆಪ್ಪ ಮಾಕಾಳಿ ನೇತೃತ್ವದಲ್ಲಿ ಮಹಿಳೆಯರು, ಮಕ್ಕಳು, ಪುರುಷರು, ಎತ್ತಿನ ಚಕ್ಕಡಿ, ಟ್ಯಾಕ್ಟರ್, ಟಂಟಂ, ದ್ವಿಚಕ್ರ ವಾಹನಗಳು ಸೇರಿದಂತೆ ನೂರಾರು ಜನ ಇಲ್ಲಿಯ ಭಕ್ತರು ಪಾದಯಾತ್ರೆ ಮೂಲಕ ಯಲ್ಲಮ್ಮದೇವಿ ದರ್ಶನಕ್ಕಾಗಿ ಪ್ರಯಾಣ ಮಾಡಿದರು.

Extra Photo

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.