
ಬೆಳಗಾವಿ: ಜಿಲ್ಲೆಯ ಮಹಿಳೆಯರ ಆರ್ಥಿಕ ಸಬಲೀಕರಣದ ಧ್ಯೇಯದೊಂದಿಗೆ 1997ರ ಫೆ.16ರಂದು ಕಾರ್ಯಾರಂಭ ಮಾಡಿದ ಇಲ್ಲಿನ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತ, ಇಂದು 30 ವರ್ಷಗಳ ಯಶಸ್ವಿ ಪಯಣ ಪೂರೈಸಿದೆ. ಗ್ರಾಹಕರ ವಿಶ್ವಾಸಾರ್ಹ ಆರ್ಥಿಕ ಸಂಸ್ಥೆಯಾಗಿ ಹೊರಹೊಮ್ಮಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಲೀಲಾವತಿ ಪ್ರಸಾದ ಇದನ್ನು ಉದ್ಘಾಟಿಸಿದ್ದರು. ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೊರೆ ಮಾರ್ಗದರ್ಶನವು ಬ್ಯಾಂಕ್‌ಗೆ ಬಲವಾದ ಆಧಾರ ಒದಗಿಸಿತು. ಅಂತೆಯೇ ಬ್ಯಾಂಕ್ ಸ್ಥಾಪನೆ ಸಮಯದಲ್ಲಿ ದಿ.ವಿಜಯಬಸಪ್ಪ ಪಟ್ಟೇದ, ದಿ.ಮಲ್ಲಯ್ಯಸ್ವಾಮಿ ಕವಟಗಿಮಠ, ದಿ.ಶ್ರೀಕಾಂತ ಜನವಾಡೆ ಮಹತ್ವದ ಪಾತ್ರ ವಹಿಸಿದ್ದರು.
ಸಂಸ್ಥಾಪಕ ಅಧ್ಯಕ್ಷೆ ಆಶಾ ಕೋರೆ ಹಾಗೂ ಇತರೆ ನಿರ್ದೇಶಕರ ನೇತೃತ್ವದಲ್ಲಿ 3,036 ಮಹಿಳಾ ಸದಸ್ಯರಿಂದ ಸಂಗ್ರಹಿಸಿದ ₹32 ಲಕ್ಷಗಳ ಷೇರು, ₹18.60 ಲಕ್ಷ ಠೇವಣಿಯೊಂದಿಗೆ ಆರಂಭವಾದ ಬ್ಯಾಂಕ್, ಇಂದು ಅಧ್ಯಕ್ಷೆ ಡಾ.ಪ್ರೀತಿ ದೊಡ್ಡವಾಡ ನೇತೃತ್ವದಲ್ಲಿ ನಾಲ್ಕು ಪಟ್ಟು ಪ್ರಗತಿ ಸಾಧಿಸಿದೆ. ಪ್ರಸ್ತುತ ₹430 ಕೋಟಿ ಠೇವಣಿ, ₹2650 ಕೋಟಿ ಮುಂಗಡ ಹೊಂದಿದ್ದು, ₹8.94 ಕೋಟಿ ನಿವ್ವಳ ಲಾಭ ಗಳಿಸಿದೆ. ಬೆಳಗಾವಿಯಲ್ಲಿ ನಾಲ್ಕು, ಹುಬ್ಬಳ್ಳಿ, ಸವದತ್ತಿ, ಗೋಕಾಕ, ಅಥಣಿ ಮತ್ತು ಚಿಕ್ಕೋಡಿಯಲ್ಲಿ ತಲಾ ಒಂದು ಸೇರಿ ಒಂಭತ್ತು ಶಾಖೆಗಳಿವೆ. ಮಹಿಳಾ ಬ್ಯಾಂಕ್ ಆಗಿರುವುದರಿಂದ ಶೇ 95ರಷ್ಟು ಮಹಿಳಾ ಸಿಬ್ಬಂದಿ ಇದ್ದಾರೆ. ಮಹಿಳೆಯರಿಗೆ ನೀಡುವ ಸಾಲದ ಬಡ್ಡಿ ದರದಲ್ಲಿ ಶೇ 1ರಷ್ಟು ರಿಯಾಯಿತಿ ಇದೆ.
ನಿರ್ದೇಶಕ ಮಂಡಳಿ: ಡಾ.ಪ್ರೀತಿ ದೊಡ್ಡವಾಡ(ಅಧ್ಯಕ್ಷೆ), ರೂಪಾ ಮುನವಳ್ಳಿ(ಉಪಾಧ್ಯಕ್ಷೆ), ಆಶಾ ಕೋರೆ, ರಾಜೇಶ್ವರಿ ಕವಟಗಿಮಠ, ಅರುಂಧತಿ ಪಟ್ಟೇದ, ಡಾ.ಸುವರ್ಣಲತಾ ಬನ್ಸೋಡೆ, ದೀಪಾ ಮುನವಳ್ಳಿ, ಪೂಜಾ ಸಾಧುನವರ, ಕೀರ್ತಿ ಮೆಟಗುಡ್, ಸೀಮಾ ಬಾಗೇವಾಡಿ, ಗಿರಿಜಾ ಕೌಜಲಗಿ, ಡಾ.ಪುಷ್ಪಾ ಮಮದಾಪುರ, ಜ್ಯೋತಿ ಮಠದ, ಬೀನಾ ಆಚಾರ(ನಿರ್ದೇಶಕರು).
ಈ ಬ್ಯಾಂಕ್ ಕಳೆದ 30 ವರ್ಷಗಳಲ್ಲಿ ಹಲವು ಮೈಲಿಗಲ್ಲು ಸಾಧಿಸಿದೆ. ಉತ್ತಮ ಸೇವೆ ಮೂಲಕ ಗ್ರಾಹಕರ ವಿಶ್ವಾಸ ಸಂಪಾದಿಸಿದೆಪ್ರಭಾಕರ ಕೋರೆ ಕಾರ್ಯಾಧ್ಯಕ್ಷ ಕೆಎಲ್‌ಇ ಸಂಸ್ಥೆ
ಮಹಿಳಾ ಸಬಲೀಕರಣದ ಧ್ಯೇಯದೊಂದಿಗೆ ಆರಂಭವಾದ ಈ ಬ್ಯಾಂಕ್ ಬಲಪಡಿಸುವಲ್ಲಿ ಬಹಳ ಶ್ರಮಿಸಲಾಗಿದೆ. ಗ್ರಾಹಕರ ವಿಶ್ವಾಸ, ನಂಬಿಕೆಗೆ ಧಕ್ಕೆಯಾಗದಂತೆ ಪಾರದರ್ಶಕ ಸೇವೆ ಒದಗಿಸುತ್ತ ಬರಲಾಗಿದೆ. ಮೂವತ್ತರ ಸಂಭ್ರಮವನ್ನು ಸುವರ್ಣ ಪಥದತ್ತ ಕೊಂಡೊಯ್ಯೋಣಆಶಾ ಪ್ರಭಾಕರ ಕೋರೆ, ನಿರ್ದೇಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.