ADVERTISEMENT

ದೂಧ್‌ಸಾಗರ ಪ್ರವಾಸಕ್ಕೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 15:56 IST
Last Updated 21 ಜುಲೈ 2023, 15:56 IST
ದೂಧ್‌ಸಾಗರ ಜಲಪಾತದ ನೋಟ (ಸಂಗ್ರಹ ಚಿತ್ರ)
ದೂಧ್‌ಸಾಗರ ಜಲಪಾತದ ನೋಟ (ಸಂಗ್ರಹ ಚಿತ್ರ)   

ಬೆಳಗಾವಿ: ಕರ್ನಾಟಕದ ಗಡಿಗೆ ಹೊಂದಿಕೊಂಡ ಗೋವಾ ರಾಜ್ಯದಲ್ಲಿ ಬರುವ ದೂಧ್‌ಸಾಗರ ಜಲಾಶಯ ವೀಕ್ಷಣೆಗೆ ತೆರಳುವುದನ್ನು ನಿರ್ಬಂಧಿಸಲಾಗಿದೆ. ಈ ಜಲಾಶಯ ಪ್ರದೇಶ ಈಗ ಅಪಾಯಕಾರಿ ಆಗಿದ್ದರಿಂದ ಗೋವಾ ಸರ್ಕಾರ ನಿರ್ಬಂಧ ಹೇರಿದೆ.

ದೂಧ್‌ಸಾಗರ ಜಲಾಶಯಕ್ಕೆ ರೈಲು ಅಥವಾ ಕಾಲ್ನಡಿಗೆಯಲ್ಲಿ ಹೋಗುವುದನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ಅಲ್ಲದೇ ಈ ಮಾರ್ಗದಲ್ಲಿ ಗೋವಾಗೆ ಸಂಚರಿಸುವ ರೈಲು ಪ್ರಯಾಣಿಕರು ಕೂಡ  ಜಲಪಾತದ ನಿಲ್ದಾಣದಲ್ಲಿ ಇಳಿಯದಂತೆ ರೈಲು ಪೊಲೀಸರು ಸೂಚನೆ ನೀಡಿದ್ದಾರೆ. ಈ ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ ಎಂದು ಎಸ್ಪಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

‘ದೂಧ್‌ಸಾಗರ ವೀಕ್ಷಣೆ ನಿಷೇಧಿಸಲಾಗಿದ್ದು ಜಿಲ್ಲೆಯಿಂದ ಯಾರೂ ಪ್ರವಾಸ ಕೈಗೊಳ್ಳಬಾರದು’ ಎಂದು ನಗರದ ರೈಲ್ವೆ ನಿಲ್ದಾಣದಲ್ಲೂ ಪ್ರಕಟಣೆ ಹಾಕಲಾಗಿದೆ.ಬೆಳಗಾವಿ: ಕರ್ನಾಟಕದ ಗಡಿಗೆ ಹೊಂದಿಕೊಂಡ ಗೋವಾ ರಾಜ್ಯದಲ್ಲಿ ಬರುವ ದೂಧ್‌ಸಾಗರ ಜಲಾಶಯ ವೀಕ್ಷಣೆಗೆ ತೆರಳುವುದನ್ನು ನಿರ್ಬಂಧಿಸಲಾಗಿದೆ. ಈ ಜಲಾಶಯ ಪ್ರದೇಶ ಈಗ ಅಪಾಯಕಾರಿ ಆಗಿದ್ದರಿಂದ ಗೋವಾ ಸರ್ಕಾರ ನಿರ್ಬಂಧ ಹೇರಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.