ಗೋಕಾಕ: ಭಾನುವಾರ ಬೆಳಗಿನ ಜಾವ ಅರ್ಧ ತಾಸು ಸುರಿದ ಧಾರಾಕಾರ ಮಳೆ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ತಂಪೆರೆಯುವ ಜೊತೆಗೆ, ಇಲ್ಲಿ ಈಚೆಗಷ್ಟೇ ನಡೆದಿದ್ದ ಬಸ್ ನಿಲ್ದಾಣದ ರಸ್ತೆ ಅಭಿವೃದ್ಧಿಯ ಕಾಮಗಾರಿಯ ಗುಣಮಟ್ಟವನ್ನೂ ತೆರದಿಟ್ಟಿದೆ.
ರಸ್ತೆಗಿಂತಲೂ ಚರಂಡಿಯ ಎತ್ತರ ಹೆಚ್ಚಿಸಿದ್ದರಿಂದ ನೀರು ಸರಾಗವಾಗಿ ಹರಿದು ಹೋಗದೇ ರಸ್ತೆಯಲ್ಲೇ ಸಂಗ್ರಹಗೊಂಡಿದ್ದು ಕಂಡುಬಂತು. ನಗರಸಭೆ ವ್ಯಾಪ್ತಿಯ ಬಹುತೇಕ ರಸ್ತೆಗಳ ಮೂಲಕ ಸಾಗುವಾಗ ಇದನ್ನು ಗಮನಿಸಬಹುದಾಗಿದೆ.
‘ಕಳಪೆ ಕಾಮಗಾರಿ ನಡೆದಿರುವುದು ನಗರಸಭೆ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೇ?’ ಎಂದು ನಾಗರಿಕರು ಕೇಳುತ್ತಿದ್ದಾರೆ. ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.