ADVERTISEMENT

SSLC Results: ಬೆಳಗಾವಿಗೆ 25, ಚಿಕ್ಕೋಡಿಗೆ 26ನೇ ಸ್ಥಾನ

27,969 ವಿದ್ಯಾರ್ಥಿಗಳು ಫೇಲ್‌

​ಪ್ರಜಾವಾಣಿ ವಾರ್ತೆ
Published 2 ಮೇ 2025, 9:25 IST
Last Updated 2 ಮೇ 2025, 9:25 IST
   

ಬೆಳಗಾವಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆ ಶೇ 62.16 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶೇ 62.12ರಷ್ಟು ಫಲಿತಾಂಶ ಪಡೆದಿವೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕೂಡ ಹೆಚ್ಚೇನೂ ಸುಧಾರಣೆ ಕಂಡಿಲ್ಲ.

ಎರಡೂ ಜಿಲ್ಲೆಗಳು ಸೇರಿ 73,869 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 45,900 ಮಂದಿ ಮಾತ್ರ ಪಾಸಾಗಿದ್ದಾರೆ. ಒಟ್ಟು 27,969 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 31,503 ವಿದ್ಯಾರ್ಥಿಗಳು ಹಾಜರಾಗಿದ್ದು, 19,583 ಮಂದಿ ಪಾಸಾಗಿದ್ದರೆ. 11,920 ವಿದ್ಯಾರ್ಥಿಗಳು ಫೇಲಾಗಿದ್ದು, ಶೇ 62.16ರಷ್ಟು ಫಲಿತಾಂಶ ಬಂದಿದೆ. ರಾಜ್ಯದಲ್ಲಿ ಜಿಲ್ಲೆಗೆ 25ನೇ ಸ್ಥಾನ ದೊರೆತಿದೆ. ಕಳೆದ ಬಾರಿ ಇದು ಶೇ.64.93ರಷ್ಟು ಫಲಿತಾಂಶದ ಮೂಲಕ 29ನೇ ಸ್ಥಾನದಲ್ಲಿತ್ತು. ಈ ಬಾರಿ ಏನೆಲ್ಲ ಕಸರತ್ತು ಮಾಡಿದರೂ ನಾಲ್ಕು ಸ್ಥಾನಗಳಷ್ಟು ಮಾತ್ರ ಮೇಲಕ್ಕೆ ಬರಲಾಗಿದೆ.

ADVERTISEMENT

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 42,366 ವಿದ್ಯಾರ್ಥಿಗಳು ಹಾಜರಾಗಿದ್ದು, 26,317 ಮಂದಿ ಪಾಸಾಗಿದ್ದಾರೆ. 16,049 ವಿದ್ಯಾರ್ಥಿಗಳು ಫೇಲಾಗಿದ್ದಾರೆ. 62.12ರಷ್ಟು ಸಾಧನೆ ಮಾಡುವ ಮೂಲಕ ರಾಜ್ಯದ ಪಟ್ಟಿಯಲ್ಲಿ 26ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ ಈ ಜಿಲ್ಲೆಗೆ ಶೇ 62.82ರಷ್ಟು ಫಲಿತಾಂಶದ ಮೂಲಕ 25ನೇ ಸ್ಥಾನ ಇತ್ತು.

ಫಲಿತಾಂಶ ವೀಕ್ಷಣೆಯ ವೆಬ್‌ಸೈಟ್‌ಗಳು

kseab.karnataka.gov.in

karresults.nic.in

ಆಯಾ ಶಾಲೆಗಳಲ್ಲೂ ಫಲಿತಾಂಶವನ್ನು ವೀಕ್ಷಣೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.