ADVERTISEMENT

ಉಪ‍ನ್ಯಾಸಕಿ ಹುಟ್ಟುಹಬ್ಬಕ್ಕೆ ಟ್ಯಾಂಕರ್‌ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 21 ಮೇ 2019, 13:56 IST
Last Updated 21 ಮೇ 2019, 13:56 IST
ಅಥಣಿಯಲ್ಲಿ ಟ್ಯಾಂಕರ್‌ ನೀರು ಪೂರೈಕೆಗೆ ಉಪನ್ಯಾಸಕಿ ಪ್ರಿಯಂವದಾ ಅಣೆಪ್ಪನವರ ಚಾಲನೆ ನೀಡಿದರು
ಅಥಣಿಯಲ್ಲಿ ಟ್ಯಾಂಕರ್‌ ನೀರು ಪೂರೈಕೆಗೆ ಉಪನ್ಯಾಸಕಿ ಪ್ರಿಯಂವದಾ ಅಣೆಪ್ಪನವರ ಚಾಲನೆ ನೀಡಿದರು   

ಅಥಣಿ: ಇಲ್ಲಿನ ಕೆಲವು ಯುವಕರು ತಮಗೆ ಕಲಿಸಿದ ಜೆ.ಎ. ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಪ್ರಿಯಂವದಾ ಅಣ್ಣೆಪ್ಪನವರ ಹುಟ್ಟುಹಬ್ಬವನ್ನು ಕೊಪ್ಪದ ಗಲ್ಲಿಯ ನಿವಾಸಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಮೂಲಕ ಮಂಗಳವಾರ ವಿಶೇಷವಾಗಿ ಆಚರಿಸಿದರು.

ಸಂತೋಷ ಬಡಕಂಬಿ, ರವಿ ಬಡಕಂಬಿ, ಶಶಿಧರ ಬರ್ಲಿ, ಅಭಯ ಸಗರಿ, ಅಕ್ಷಯ ಕಾರ್ವೇಕರ, ಅನಿಲ ಪೂಜಾರಿ ನೆಚ್ಚಿನ ಉಪನ್ಯಾಸಕಿಗೆ ವಿಶೇಷ ಉಡುಗೊರೆ ನೀಡಿದರು.

‘ನನ್ನ ಜೀವನದ ಅವಿಸ್ಮರಣೀಯವಾದ ದಿನವಿದು. ನನ್ನ ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿ ತೋರಿ, ಜನರಿಗೆ ನೀರಿನ ವ್ಯವಸ್ಥೆ ಮಾಡಿರುವುದು ಖುಷಿ ತರಿಸಿದೆ. ಈ ಕ್ಷಣವನ್ನು ಮರೆಯುವುದಿಲ್ಲ’ ಎಂದರು.

ADVERTISEMENT

‘ನಮ್ಮ ನೆಚ್ಚಿನ ಉಪನ್ಯಾಸಕಿಗೆ ವಿನೂತನ ಉಡುಗೂರೆ ನೀಡಬೇಕೆಂದು ಚರ್ಚಿಸುತ್ತಿದ್ದೆವು. ನೀರು ಪೂರೈಸುವ ವಿಚಾರ ಬಂತು. ಸ್ನೇಹಿತರೆಲ್ಲರೂ ಸೇರಿ ನೀರು ಪೂರೈಸಿದ್ದೇವೆ. ಇದರಿಂದ ಜನರಿಗೂ ಅನುಕೂಲವಾಯಿತು’ ಎಂದು ಸಂತೋಷ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.