ADVERTISEMENT

ಸತ್ತಿ: ಎಸ್‌ಡಿಎಂಸಿ ಸದಸ್ಯರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 14:18 IST
Last Updated 3 ಫೆಬ್ರುವರಿ 2020, 14:18 IST
ಅಥಣಿ ತಾಲ್ಲೂಕು ಸತ್ತಿ ಗ್ರಾಮದಲ್ಲಿ ಎಸ್.ಡಿ.ಎಂ.ಸಿ. ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದ ಉದ್ಘಾಟನೆ ವೇಳೆ ತಾಲ್ಲೂಕು ಪಂಚಾಯಿತಿ ಸದಸ್ಯ ಜಡೆಪ್ಪ ಕುಂಬಾರ ಹಾಗೂ ಅತಿಥಿಗಳು ಇದ್ದಾರೆ
ಅಥಣಿ ತಾಲ್ಲೂಕು ಸತ್ತಿ ಗ್ರಾಮದಲ್ಲಿ ಎಸ್.ಡಿ.ಎಂ.ಸಿ. ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದ ಉದ್ಘಾಟನೆ ವೇಳೆ ತಾಲ್ಲೂಕು ಪಂಚಾಯಿತಿ ಸದಸ್ಯ ಜಡೆಪ್ಪ ಕುಂಬಾರ ಹಾಗೂ ಅತಿಥಿಗಳು ಇದ್ದಾರೆ   

ಅಥಣಿ: ‘ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಾಗೂ ಶೈಕ್ಷಣಿಕ ಕಾರ್ಯಚಟುವಟಿಕೆಗಳು ವ್ಯವಸ್ಥಿತವಾಗಿ ಸಾಗುವಂತಾಗಲು ಎಸ್.ಡಿ.ಎಂ.ಸಿ. ಸದಸ್ಯರ ಕೊಡುಗೆ ಅಪಾರವಾಗಿದೆ. ಶಿಕ್ಷಕರೊಂದಿಗೆ ಸಮಾಲೋಚಿಸಿ ನಡೆಸಿ ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಿದರೆ ಶಾಲೆಗಳು ಮಾದರಿಯಾಗುತ್ತವೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಜಡೆಪ್ಪ ಕುಂಬಾರ ಹೇಳಿದರು.

ಸಮೀಪದ ಸತ್ತಿ ಗ್ರಾಮದ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಬಿಇಒ ಕಚೇರಿ ಹಾಗೂ ವಲಯ ಸಮೂಹ ಸಂಪನ್ಮೂಲ ಕೇಂದ್ರದಿಂದ ಆಯೋಜಿಸಿದ್ದ ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಮುಖ್ಯಶಿಕ್ಷಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಠಲ ತಟ್ರಿ, ಅಣ್ಣಪ್ಪ ರುದ್ರಗೌಡರ, ವಲಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎಚ್. ಜುಲಪಿ, ಆರ್.ಕೆ. ಹಳ್ಳೋಳ್ಳಿ, ಸುನೀಲ ಸನದಿ, ಎ.ಆರ್. ಹುಣಸಿಕಟ್ಟಿ, ಇಲಾಯಿ ಮೀರಾಬಾಯಿ, ಬಸವಶ್ರೀ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಚಿದಾನಂದ ಪಾಟೀಲ ಇದ್ದರು.

ADVERTISEMENT

ವಿವಿಧ 12 ಶಾಲೆಗಳ ಎಸ್‌ಡಿಎಂಸಿ ಸದಸ್ಯರು ಶಿಬಿರದಲ್ಲಿ ಭಾಗವಹಿಸಿದ್ದರು.

‌ಶಿಕ್ಷಕ ಶಂಭುಲಿಂಗ ಕಾಂಬಳೆ ನಿರೂಪಿಸಿದರು. ಎಸ್.ಎ. ಮಟ್ಟೆಪ್ಪನವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.