ADVERTISEMENT

ಬೆಳಗಾವಿ: 5000 ಮೀ. ಓಟದಲ್ಲೂ ರಕ್ಷಿತಾ ಪ್ರಥಮ

ಮಹಿಳೆಯರ ಟ್ರಿಪಲ್ ಜಂಪ್‌ನಲ್ಲಿ ಜಿ.ಪವಿತ್ರಾ ಹೊಸ ದಾಖಲೆ

​ಪ್ರಜಾವಾಣಿ ವಾರ್ತೆ
Published 23 ಮೇ 2023, 16:16 IST
Last Updated 23 ಮೇ 2023, 16:16 IST
ಟ್ರಿಪಲ್‌ ಜಂಪ್‌ನಲ್ಲಿ ಸಾಧನೆ ಮೆರೆದ ಜಿ.ಪವಿತ್ರಾ
ಟ್ರಿಪಲ್‌ ಜಂಪ್‌ನಲ್ಲಿ ಸಾಧನೆ ಮೆರೆದ ಜಿ.ಪವಿತ್ರಾ   

ಬೆಳಗಾವಿ: ಪುತ್ತೂರಿನ ವಿವೇಕಾನಂದ ಕಾಲೇಜ್‌ ಆಫ್ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ (ವಿಸಿಇಟಿ) ವಿದ್ಯಾರ್ಥಿನಿ ಐ.ರಕ್ಷಿತಾ ಅವರು ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಮಂಗಳವಾರ ನಡೆದ, ವಿಟಿಯು 24ನೇ ಅಂತರ ಕಾಲೇಜು ಅಥ್ಲೆಟಿಕ್ ಕೂಟದ ಮಹಿಳೆಯರ ವಿಭಾಗದ 5,000 ಮೀ. ಓಟದಲ್ಲೂ ಪ್ರಥಮ ಸ್ಥಾನ ಪಡೆದರು.

ಸೋಮವಾರ ನಡೆದ ಎರಡನೇ ದಿನದ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ (2 ಗಂಟೆ 17 ನಿಮಿಷ 13 ಸೆಕೆಂಡ್‌) ಕೂಡ ರಕ್ಷಿತಾ ಅವರು ಹೊಸ ದಾಖಲೆ ಬರೆದಿದ್ದರು. ಮೂರನೇ ದಿನ ಓಟದಲ್ಲೂ ಪಾರಮ್ಯ ಮೆರೆದರು. 5,000 ಮೀ. ಓಟದಲ್ಲಿ ಕೂರ್ಗ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಕೆ.ಟಿ.ಚೋಂದಮ್ಮ (ದ್ವಿತೀಯ) ಹಾಗೂ ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಸೀಮಾ ತೆಂಡೂಲ್ಕರ್ ಮೂರನೇ ಸ್ಥಾನ ಪಡೆದರು.

ಮಹಿಳೆಯರ 4X100 ಮೀ. ರಿಲೇನಲ್ಲಿ ಪೂತ್ತೂರಿನ ವಿವೇಕಾನಂದ ಕಾಲೇಜು ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಜಿ.ಪವಿತ್ರ ನೇತೃತ್ವದ ತಂಡ (ಪ್ರಥಮ), ಆರ್.ವಿ.ಎಂಜಿನಿಯರಿಂಗ್ ಕಾಲೇಜಿನ ಎಲ್.ಜಿ.ನಮ್ಯ ನೇತೃತ್ವದ ತಂಡ (ದ್ವಿತೀಯ) ಹಾಗೂ ಮಂಗಳೂರಿನ ಸೆಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಶುಭ್ರಾ ರೈ ನೇತೃತ್ವದ ತಂಡ (ತೃತೀಯ) ಸ್ಥಾನ ಪಡೆದುಕೊಂಡವು.

ADVERTISEMENT

ಮಹಿಳೆಯರ ಟ್ರಿಪಲ್ ಜಂಪ್‌ನಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜು ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಜಿ.ಪವಿತ್ರಾ ಅವರಯ 12.58 ಮೀ. ಜಿಗಿಯುವ ಮೂಲಕ ತಮ್ಮದೇ ಹಳೆಯ  ದಾಖಲೆ 12.11 ಮೀ.ಅನ್ನು ಮುರಿದು ಹೊಸ ದಾಖಲೆಯನ್ನು ಮಾಡಿದರು. ವಿಶೇಷವೆಂದರೆ ಮಹಿಳೆಯರ 4X100 ಮೀ. ರಿಲೇನಲ್ಲಿ ಪ್ರಥಮ ಸ್ಥಾನ ಗೆದ್ದ ತಂಡದ ಸದಸ್ಯೆ ಕೂಡ ಆಗಿದ್ದಾರೆ.

ಮಹಿಳೆಯರ ಹೆಪ್ತಾಲೊನ್ (ಏಳು ಆಟಗಳು)ನಲ್ಲಿ 2,206 ಅಂಕಗಳನ್ನು ಗಳಿಸಿದ ಪೂತ್ತೂರಿನ ವಿವೇಕಾನಂದ ಕಾಲೇಜು ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಬಿ.ಜಯಶ್ರೀ (ಪ್ರಥಮ), 1,720 ಅಂಕಗಳಿಸಿದ ಎಎಂಸಿ ಎಂಜಿನಿಯರಿಂಗ್ ಕಾಲೇಜಿನ ಎಂ.ಧ್ರುವ ಮತ್ತು 1,269 ಅಂಕ ಗಳಿಸಿದ ಮೈಸೂರಿನ ಎನ್‌ಐಇ ಕಾಲೇಜಿನ ಎಂ.ಎ.ಅನಘಾ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.

ಮಹಿಳೆಯರ ಗುಂಡು ಎಸೆತದಲ್ಲಿ ಮಂಗಳೂರಿನ ಎಸ್‌ಐಟಿ ಕಾಲೇಜಿನ ರಿಕ್ತಾ ಕಿರಣ್ (9.94 ಮೀ), 200 ಮೀ. ಓಟದಲ್ಲಿ ಬಿ.ಎಂಎಸ್‌ ಆರ್ಕಿಟೆಕ್ಚರ್ ಕಾಲೇಜಿನ ಎಸ್‌.ಧೃತಿ ಅವರು ಮೊದಲ ಸ್ಥಾನಗಳನ್ನು ಪಡೆರು.

ಪುರುಷರ ವಿಭಾಗ: 4X100 ಮೀ. ರಿಲೇನಲ್ಲಿ ಪೂತ್ತೂರಿನ ವಿವೇಕಾನಂದ ಕಾಲೇಜು ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಲೋಹಿತ್ ನೇತೃತ್ವದ ತಂಡ, 5000 ಮೀ. ಓಟದಲ್ಲಿ ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿ.ರಂಗನಾಥ, ಗುಂಡು ಎಸೆತದಲ್ಲಿ ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಸಂಪತ್ ಹೆಗ್ಡೆ (12.72 ಮೀ), 110 ಮೀ. ಅಡೆತಡೆ ಓಟದಳ್ಳಿ ತುಮಕೂರಿನ ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಸ್‌.ಎಂ.ಹರ್ಷ, ಟ್ರಿಪಲ್ ಜಂಪ್‌ನಲ್ಲಿ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎನ್‌.ಎಂ.ಜೀವನ್ (13.91 ಮೀ), 200 ಮೀ. ಓಟದಲ್ಲಿ ಕೋಲಾರದ ತಿಮ್ಮಯ್ಯ ಎಂಜಿನಿಯರಿಂಗ್ ಕಾಲೇಜಿನ ಬಿ.ಧನುಷ್ ಮೊದಲ ಸ್ಥಾನಗಳನ್ನು ಪಡೆದರು.

ಮೂರನೇ ದಿನದ ಅಂತ್ಯಕ್ಕೆ ‍ಪುತ್ತೂರಿನ ವಿವೇಕಾನಂದ ಕಾಲೇಜು ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ 112 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, 46 ಅಂಕಗಳಿಸಿದ ನಿಟ್ಟೆಯ ಎನ್.ಎಂ.ಎ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದ್ವಿತೀಯ ಹಾಗೂ 34 ಅಂಕಗಳೊಂದಿಗೆ ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ತೃತೀಯ ಸ್ಥಾನದಲ್ಲಿವೆ.

ಪವಿತ್ರ ಜಿ., ಸಹ ಇದ್ದರು. ಇದೆ ಕ್ರೀಡೆಯಲ್ಲಿ ಏನ್ ಎಂ ಎ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿಟ್ಟೆಯ ವಿದ್ಯಾರ್ಥಿನಿ ಮೇಧಾ ಎಸ ೯.೩೦ ಮೀ ಹಾಗೂ ಹಾಸನ್ ದ ನವಕಿಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ನ ವಿದ್ಯಾರ್ಥಿನಿ ಲಾವಣ್ಯ ಎ ಪಿ ೮.೮೭ ಮೀ ಜಿಗಿಯುವದರ ಮೂಲಕ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.