ಬೆಂಗಳೂರು: ಮೇಯರ್ ನಿಧಿ ಹಂಚಿಕೆಗೆ ಸಂಬಂಧಪಟ್ಟಂತೆ ಸಚಿವರೊಬ್ಬರ ತಾಕೀತಿನಿಂದ ಬೇಸತ್ತ ಮೇಯರ್ ಪಿ.ಶಾರದಮ್ಮ ಅವರು ರಾಜೀನಾಮೆ ನೀಡಲು ಮುಂದಾದ ಪ್ರಸಂಗ ಗುರುವಾರ ನಡೆದಿದೆ ಎಂದು ತಿಳಿದುಬಂದಿದೆ.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ನಡೆದ ಮೇಯರ್ ನಿಧಿ ಹಂಚಿಕೆ ಸಂಬಂಧಪಟ್ಟ ಮಾತುಕತೆ ಸಂದರ್ಭದಲ್ಲಿ ಗೃಹ ಸಚಿವ ಆರ್.ಅಶೋಕ ಅವರ ಮಾತಿಗೆ ಬೇಸರಗೊಂಡ ಮೇಯರ್ ಕಣ್ಣೀರಿಟ್ಟು ಹೊರನಡೆದರು ಎನ್ನಲಾಗಿದೆ.
ಮೇಯರ್ ನಿಧಿಯಲ್ಲಿ ಹೆಚ್ಚಿನ ಮೊತ್ತವನ್ನು ತಾವು ಸೂಚಿಸಿದವರಿಗೆ ನೀಡಬೇಕೆಂದು ಸಚಿವರು ಸೂಚಿಸಿದ್ದರು. ಆದರೆ ಇದಕ್ಕೆ ಮೇಯರ್ ಒಪ್ಪಲಿಲ್ಲ. ಇದನ್ನೇ ತರಾಟೆ ತೆಗೆದುಕೊಂಡ ಸಚಿವರು ಮೇಯರ್ ಪ್ರತಿಕ್ರಿಯೆಗೆ ತೀಕ್ಷವಾಗಿ ಉತ್ತರಿಸಿದರು ಎನ್ನಲಾಗಿದೆ.
ಅಲ್ಲದೇ ಸಚಿವರು ತಾವು ಸೂಚನೆ ನೀಡಿದರಿಗೆ ಹೆಚ್ಚಿನ ಮೊತ್ತ ಕೊಡದೇ ಹೋದಲ್ಲಿ ಮೇಯರ್ ನಿಧಿಯ ಮೊತ್ತವನ್ನು ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆದರೆ ಮೇಯರ್ ಇತರರಿಗೆ ಸಮನಾಗಿ ಮೊತ್ತವನ್ನು ಹಂಚುವುದಕ್ಕೆ ಬದ್ದರಾಗಿರುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಇತರರಿಗೆ ಹೆಚ್ಚಿನ ಮೊತ್ತ ನೀಡುವ ಬಗ್ಗೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೇಯರ್ `ಇಂತಹ ಯಾವುದೇ ಘಟನೆ ನಡೆದಿಲ್ಲ. ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸಿಲ್ಲ~ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.