ADVERTISEMENT

ಬಿಜೆಪಿ ಶಾಸಕ ಚಂದ್ರಪ್ಪಗೆ ಬಿಡಿಎ ನಿವೇಶನ: ಲೋಕಾಯುಕ್ತಕ್ಕೆ ದೂರು ನೀಡಿದ ಆಪ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 2:46 IST
Last Updated 18 ಸೆಪ್ಟೆಂಬರ್ 2022, 2:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಬಿಎಂಪಿ ಕನ್ನಡ ಶಾಲೆಗೆ ಮೀಸಲಾಗಿದ್ದಬಿಡಿಎ ನಿವೇಶನವನ್ನು ಅಕ್ರಮವಾಗಿ ಶಾಸಕರಿಗೆ ಮಾರಾಟ ಮಾಡಿದ ಆರೋಪದ ಮೇಲೆ ಬಿಡಿಎ ಆಯುಕ್ತರಾಗಿದ್ದ ಮೂವರು, ಹಾಲಿ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಮತ್ತು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ವಿರುದ್ಧ ಆಮ್‌ ಆದ್ಮಿ ಪಕ್ಷದ ಮುಖಂಡ ಕೆ. ಮಥಾಯಿ ಲೋಕಾಯುಕ್ತರಿಗೆ ಶನಿವಾರ ದೂರು ಸಲ್ಲಿಸಿದ್ದಾರೆ.‌

‘ಬಿಬಿಎಂಪಿ ಕನ್ನಡ ಶಾಲೆಗೆ ಮಂಜೂರಾಗಿದ್ದ ನಿವೇಶವನ್ನು ಶಾಸಕ ಚಂದ್ರಪ್ಪ ಸುಳ್ಳು ಮಾಹಿತಿ ನೀಡಿ ಗುತ್ತಿಗೆಗೆ ಪಡೆದುಕೊಂಡಿ ದ್ದರು. ₹ 50 ಕೋಟಿ ಮೌಲ್ಯದ ನಿವೇ ಶನವನ್ನು ₹ 10 ಕೋಟಿಗೆ ಶಾಸಕರಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಶಾಸಕರು ಪ್ರಭಾವ ಬಳಸಿ ಅಕ್ರಮ ಎಸಗಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಿಡಿಎ ಆಯುಕ್ತರಾಗಿದ್ದ ಎಂ.ಬಿ. ರಾಜೇಶ್‌ ಗೌಡ, ಸುಬೀರ್‌ ಹರಿಸಿಂಗ್‌ ಮತ್ತು ಭರತ್‌ ಲಾಲ್‌ ಮೀನಾ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಮಥಾಯಿ ದೂರಿದ್ದಾರೆ. ಈ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್‌ ಅವರನ್ನು ದೂರಿನಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.