ADVERTISEMENT

ವಿಮಾನ ಪ್ರಯಾಣಕ್ಕೆ ಆ್ಯಪ್ ಕಡ್ಡಾಯವಲ್ಲ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 20:19 IST
Last Updated 19 ಆಗಸ್ಟ್ 2020, 20:19 IST
ಆರೋಗ್ಯ ಸೇತು
ಆರೋಗ್ಯ ಸೇತು   

ಬೆಂಗಳೂರು: ವಿಮಾನ ಪ್ರಯಾಣಕ್ಕೆ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಕಡ್ಡಾಯವಲ್ಲ ಎಂದು ಮಾರ್ಪಡಿಸಿದ ಸುತ್ತೋಲೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಹೈಕೋರ್ಟ್‌ಗೆ ಸಲ್ಲಿಸಿದೆ.

ಅನಿವರ್ ಎ. ಅರವಿಂದ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ಆ್ಯಪ್ ಒಳ್ಳೆಯದು ಅಥವಾ ಕೆಟ್ಟದ್ದು ಎಂಬುದು ಮುಖ್ಯ ಅಲ್ಲ. ಸರ್ಕಾರದ ಸವಲತ್ತು ಪಡೆಯಲು ಈ ಆ್ಯಪ್ ಕಡ್ಡಾಯವೇ ಎಂಬುದು ಮುಖ್ಯ’ ಎಂದು ಪೀಠ ಹೇಳಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.