ADVERTISEMENT

ಕಾರು ಗುದ್ದಿ ಮಗು ಸಾವು: ಚಾಲಕನಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 15:35 IST
Last Updated 26 ಡಿಸೆಂಬರ್ 2023, 15:35 IST
 ಬಂಧನ
ಬಂಧನ   

ಬೆಂಗಳೂರು: ಕಾರು ಗುದ್ದಿ ಎರಡು ವರ್ಷದ ಮಗು ಬೇಬಿ ಮಿನಿಯಾ ಮೃತಪಟ್ಟಿದ್ದ ಪ್ರಕರಣದಲ್ಲಿ ಚಾಲಕ ಮೊಹಮ್ಮದ್ ಇಶಾಕ್‌ಗೆ (44) ನಾಲ್ಕು ತಿಂಗಳ ಸಾದಾ ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿ 6ನೇ ಎಂಎಂಟಿಸಿ ಸಂಚಾರ ನ್ಯಾಯಾಲಯ ಆದೇಶ ಹೊರಡಿಸಿದೆ.

ಎಚ್‌ಎಎಲ್ ಏರ್‌ಪೋರ್ಟ್ ಸಂಚಾರ ಠಾಣೆ ವ್ಯಾಪ್ತಿಯ ರಾಮಯ್ಯ ರೆಡ್ಡಿ ಕಾಲೊನಿಯಲ್ಲಿ 2023ರ ಸೆಪ್ಟೆಂಬರ್ 21ರಂದು ಅಪಘಾತ ಸಂಭವಿಸಿತ್ತು.

‘ಗಂಡು ಮಗು ಬೇಬಿ ಮಿನಿಯಾ, ಖಾಲಿ ನಿವೇಶನದಲ್ಲಿ ಆಟವಾಡುತ್ತಿದ್ದ. ಇದೇ ಸ್ಥಳಕ್ಕೆ ಬಂದಿದ್ದ ಆರೋಪಿ ಮೊಹಮ್ಮದ್ ಇಶಾಕ್, ಹಿಮ್ಮುಖವಾಗಿ ಕಾರು ಚಲಾಯಿಸಿದ್ದರು. ಮಗುವಿಗೆ ಕಾರು ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡಿದ್ದ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿತ್ತು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿತ್ತು. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.