ಬೆಂಗಳೂರು: ತರಕಾರಿ ಚೀಲಗಳಲ್ಲಿ ಭಾರಿ ಪ್ರಮಾಣದ ಮದ್ಯದ ಬಾಕ್ಸ್‌ಗಳನ್ನು ವಾಹನದಲ್ಲಿ ತಮಿಳುನಾಡಿಗೆ ಕಳ್ಳಸಾಗಣೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚಿ, ಇಬ್ಬರನ್ನು ಬಂಧಿಸಿದ್ದಾರೆ.
ವಾಹನದ ಚಾಲಕ ತಮಿಳುನಾಡಿನ ತಿರುವಣ್ಣಾಮಲೈನ ರಾಮಕೃಷ್ಣನ್ (24) ಹಾಗೂ ರಾಜಕುಮಾರ್ (27) ಬಂಧಿತರು.
ಕೆ.ಆರ್. ಮಾರುಕಟ್ಟೆ ಬಳಿ ಹಾಕಲಾಗಿದ್ದ ಚೆಕ್ ಪೋಸ್ಟ್ ಬಳಿ ತಪಾಸಣೆ ವೇಳೆ ಇವರು ಸಿಕ್ಕಿಬಿದ್ದಿದ್ದಾರೆ.
'ಒಟ್ಟು 58 ಬಾಕ್ಸ್‌ಗಳಲ್ಲಿ 509 ಲೀಟರ್‌ನಷ್ಟು ಮದ್ಯವನ್ನು ತರಕಾರಿ ಚೀಲಗಳಲ್ಲಿ ತುಂಬಿಸಿ, ಕಳ್ಳಸಾಗಣೆ ಮಾಡಲು ಮುಂದಾಗಿದ್ದರು. ತಪಾಸಣೆ ವೇಳೆ ಆರೋಪಿಗಳನ್ನು ಬಂಧಿಸಿ, ಮದ್ಯದ ಬಾಕ್ಸ್‌ಗಳನ್ನು ಜಪ್ತಿ ಮಾಡಲಾಗಿದೆ' ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.