
ಪ್ರಜಾವಾಣಿ ವಾರ್ತೆ
ಬೆಂಗಳೂರು: ಸುಮನಹಳ್ಳಿ ಪ್ರಾಣಿಗಳ ಚಿತಾಗಾರ ಜ.12ರಿಂದ ಪುನರಾರಂಭವಾಗಲಿದೆ ಎಂದು ಪಶ್ಚಿಮ ನಗರ ಪಾಲಿಕೆ ಆಯುಕ್ತ ಕೆ.ವಿ. ರಾಜೇಂದ್ರ ತಿಳಿಸಿದರು.
ಚಿಮಣಿ ಕುಸಿದು 2025ರ ಏಪ‍್ರಿಲ್ 14ರಿಂದ ಮುಚ್ಚಲಾಗಿದ್ದ ಸುಮನಹಳ್ಳಿ ಪ್ರಾಣಿಗಳ ಚಿತಾಗಾರ
ದಲ್ಲಿ 120 ಅಡಿಗಳ ಚಿಮಣಿ ಪುನರ್ ನಿರ್ಮಾಣ ಮಾಡಲಾಗಿದೆ.
ಪಶ್ಚಿಮ ನಗರ ಪಾಲಿಕೆ ಎಂಜಿನಿಯರಿಂಗ್ ವಿಭಾಗವು ಹೊಸ ಚಿಮಣಿ ರಚನೆಯನ್ನು ಮರುಸ್ಥಾಪಿಸಿದೆ. ಇದರಿಂದ, ಮೃತ ಸಾಕುಪ್ರಾಣಿಗಳು ಮತ್ತು ಬೀದಿ ಪ್ರಾಣಿಗಳ ವಿಲೇವಾರಿಗೆ ಸಹಕಾರಿ
ಯಾಗಲಿದೆ. ಈ ಚಿತಾಗಾರವು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ ಎಂದರು.
ಮಾಹಿತಿಗೆ: 9743454593
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.