
ಕೆ.ಆರ್.ಪುರ: ಚಿಕ್ಕಬನಹಳ್ಳಿ ಗ್ರಾಮದ ಹಲವು ಸರ್ಕಾರಿ ಸರ್ವೆ ನಂಬರ್‌ಗಳ ಜಮೀನುಗಳಲ್ಲಿ ಹಾದು ಹೋಗುವ ರಾಜಕಾಲುವೆ, ಬಂಡಿದಾರಿಗಳ ಪಥ ಬದಲಾವಣೆಗೆ ಅವಕಾಶ ನೀಡಬಾರದೆಂದು ಜೈ ಭೀಮ್ ಕರ್ನಾಟಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಅಣ್ಣಯ್ಯ ಅವರು ಪೂರ್ವ ತಾಲ್ಲೂಕು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
‘ಬಿದರಹಳ್ಳಿ ಹೋಬಳಿ ಚಿಕ್ಕಬನಹಳ್ಳಿ ಹಲವು ಸರ್ವೆ ನಂಬರ್‌ಗಳಿಗೆ ಸೇರಿದ ಜಮೀನುಗಳಲ್ಲಿರುವ ರಾಜಕಾಲುವೆ, ಬಂಡಿದಾರಿಯನ್ನು ಸ್ಟರ್ಲಿಂಗ್ ಅರ್ಬನ್ ಇನ್-ಫ್ರಾ ಪ್ರಾಜೆಕ್ಟ್ ಮತ್ತು ಗೋಪಾಲನ್, ಪ್ರೆಸ್ಟೀಜ್ ಪ್ರಾಜೆಕ್ಟ್ ಅವರು ಪಥ ಬದಲಾವಣೆಗೆ ಕಚೇರಿಗೆ ಮಾಡಿರುವ ಮನವಿಯನ್ನು ತಿರಸ್ಕರಿಸಬೇಕು’ ಎಂದರು.
‘ಹಗದೂರು, ಸೋರಹುಣಸಿ ಗ್ರಾಮ, ಶೀಗೇಹಳ್ಳಿ, ಗುಂಜೂರು, ವೈಟ್‌ಫೀಲ್ಡ್ ಮತ್ತು ಪಟ್ಟಂದೂರು ಅಗ್ರಹಾರ ಗ್ರಾಮಗಳಲ್ಲಿ ಹಲವಾರು ರಸ್ತೆಗಳು, ರಾಜಕಾಲುವೆಗಳು, ಗೋಮಾಳ, ಗುಂಡು ತೋಪುಗಳನ್ನು ಈ ಹಿಂದೆಯೇ ಹಲವರು ಒತ್ತುವರಿ ಮಾಡಿಕೊಂಡಿದಿದ್ದಾರೆ. ಈ ಪಥ ಬದಲಾವಣೆಗೆ ಅವಕಾಶ ಮಾಡಿಕೊಡಬಾರದು. ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ನೋಂದಣಿಗೂ ತಡೆ ನೀಡಬೇಕು. ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನೂ ಕಲ್ಪಿಸಬಾರದು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.