
ಆರ್ಯನ್ ಖಾನ್
ಬೆಂಗಳೂರು: ಬಾಲಿವುಡ್ ನಟ ಶಾರುಕ್ ಖಾನ್ ಮಗ ಆರ್ಯನ್ ಖಾನ್ ಬೆಂಗಳೂರಿನ ಪಬ್‌ವೊಂದರ ಬಾಲ್ಕನಿಯಲ್ಲಿ ನಿಂತು ಅಸಭ್ಯವಾಗಿ ಕೈ ಬೆರಳು ತೋರಿಸಿದ ದೃಶ್ಯ ಇರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನ.28ರಂದು ಆರ್ಯನ್ ಖಾನ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದರು. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಬ್‌ವೊಂದರಲ್ಲಿ ಆರ್ಯನ್ ಖಾನ್ ನೋಡಲು ಅಭಿಮಾನಿಗಳು ಬಂದಿದ್ದರು. ಆ ವೇಳೆ ಆರ್ಯನ್ ಖಾನ್ ಪಬ್‌ನ ಬಾಲ್ಕನಿಯಲ್ಲಿ ನಿಂತು, ಅಲ್ಲಿದ್ದ ಸಾರ್ವಜನಿಕರತ್ತ ಮಧ್ಯದ ಬೆರಳು ತೋರಿಸಿದ್ದರು. ನಂತರ ಅಭಿಮಾನಗಳತ್ತ ಕೈಬೀಸಿ ತೆರಳಿದ್ದರು. ಆ ದೃಶ್ಯವನ್ನು ಅಭಿಮಾನಿಗಳು ವಿಡಿಯೊ ಮಾಡಿಕೊಂಡಿದ್ದು ಅಸಭ್ಯವಾಗಿ ವರ್ತನೆ ತೋರಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವರ ವರ್ತನೆ ಟೀಕೆಗೆ ಗುರಿಯಾಗಿದೆ.
ವಸತಿ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ಅವರ ಮಗ, ಚಿತ್ರನಟ ಝೈದ್ ಖಾನ್ ಹಾಗೂ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ಜತೆಗಿದ್ದರು. ಆರ್ಯನ್ ಖಾನ್ ಅವರು ಬೆರಳು ತೋರಿಸಿದ್ದ ವೇಳೆ ಝೈದ್ ಖಾನ್ ಹಾಗೂ ಮೊಹಮ್ಮದ್ ನಲಪಾಡ್ ಅವರು ನಗುತ್ತಾ ಪ್ರತಿಕ್ರಿಯಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.