
ಬೆಂಗಳೂರು: ‘ಭವಿಷ್ಯವನ್ನು ಉತ್ತಮವಾಗಿಸಿಕೊಳ್ಳಲು ಸಣ್ಣ ವಯಸ್ಸಿನಿಂದಲೇ ವಿದ್ಯಾಭ್ಯಾಸದ ಕಡೆ ಗಮನ ನೀಡಿ ಉನ್ನತ ಸಾಧನೆ ಮಾಡಿ’ ಎಂದು ಎಂದು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಕಿವಿಮಾತು ಹೇಳಿದರು.
ಶ್ರೀ ನಾರಾಯಣಗುರು ಸೇವಾ ಚಾರಿಟಬಲ್ ಟ್ರಸ್ಟ್ ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪುನೀತ್ ಪುಸ್ತಕ ಯೋಜನೆಯಡಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರ ಕೋಶ ವಿತರಿಸಿ ಅವರು ಮಾತನಾಡಿದರು.
‘ಪುನೀತ್ ಪುಸ್ತಕ ಯೋಜನೆ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿರುವುದು ಸಂತಸ ತಂದಿದೆ. ಪುನೀತ್ ಅವರ ಹೆಸರಿನಲ್ಲಿ ಈ ಯೋಜನೆ ಮಾಡುತ್ತಿರುವುದು ಹೆಮ್ಮೆ’ ಎಂದರು.
ಶ್ರೀ ನಾರಾಯಣಗುರು ಸೇವಾ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಮಾಸ್ತಿ ಟಿ.ಸಿ.ರಮೇಶ್ ಮಾತನಾಡಿ, ‘ಬಾಲ್ಯದಲ್ಲಿ ವಿದ್ಯಾಭ್ಯಾಸಕ್ಕೆ ತೊಂದರೆಯಿತ್ತು. ಈಗ ಚೆನ್ನಾಗಿ ದುಡಿಯುತ್ತಿರುವುದರಿಂದ ಶಿಕ್ಷಣ ಕ್ಷೇತ್ರಕ್ಕೆ ಏನನ್ನಾದರೂ ನೀಡಬೇಕು ಎಂಬ ಸದಾಶಯದೊಂದಿಗೆ ಈ ಯೋಜನೆ ಕೈಗೆತ್ತಿಕೊಂಡಿದ್ದೇನೆ. ಈ ಮೂಲಕ ಪುನೀತ್ ರಾಜಕುಮಾರ್ ಸ್ಮರಿಸಲು ಹೆಸರಿಟ್ಟಿದ್ದೇನೆ’ ಎಂದರು.
ಕರ್ನಾಟಕ ರಾಜ್ಯ ಆರ್ಯ ಈಡಿಗರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಟಿ.ವಾಸನ್ ಮಾತನಾಡಿದರು.
ರಂಗ ವಿಜಯಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಮಾಲೂರು ವಿಜಿ, ನಾರಾಯಣ ಗುರು ಮಹಾ ಸಂಸ್ಥಾನದ ಸಂಸ್ಥಾಪಕ ಅಂಬ ಅಂಬರೀಶ್, ವ್ಯವಸ್ಥಾಪಕ ಪಿ.ಶ್ರೀನಿವಾಸ್, ಮಂಜುನಾಥ್, ಆರ್ ರಘು, ಕೆ. ರಮೇಶ್ ಬಾಬು, ಕಿರುತರೆ ನಟಿ ಗೀತಾ ರಾಘವೇಂದ್ರ, ಚೈತ್ರಾ ಲಕ್ಷ್ಮಣ್ ಮೂರ್ತಿ, ಶಶಿಕಲಾ, ಹರೀಶ್ ಚಿಕ್ಕ ತಿರುಪತಿ, ಹಸಾಂಡಹಳ್ಳಿ ವಿಜಯ್ ಕುಮಾರ್, ಸುನೀಲ್ ದೊಡ್ಡಮನೆ, ಕೃಷ್ಣಮೂರ್ತಿ ಚಿಕ್ಕತಿರುಪತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.