ADVERTISEMENT

ಟಿಪಿಎಂಎಲ್‌ನ ಮುದ್ರಣ, ನಿರ್ವಹಣೆ ವಿಭಾಗಕ್ಕೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 20:35 IST
Last Updated 24 ಫೆಬ್ರುವರಿ 2024, 20:35 IST
ತೀರ್ಪುಗಾರರಾದ ಕುಲಕರ್ಣಿ (ಎಡದಿಂದ ಮೂರನೆಯವರು) ಅವರಿಂದ ದಿ ಪ್ರಿಂಟರ್ಸ್‌(ಮೈಸೂರು) ಪ್ರೈವೇಟ್‌ ಲಿಮಿಟೆಡ್‌ (ಟಿಪಿಎಂಎಲ್‌) ಮುದ್ರಣ ಹಾಗೂ ನಿರ್ವಹಣೆ ವಿಭಾಗದ ಮಂಗೈಯರ್ ತಿಲಗಂ, ಲೋಕನಾಥ್ ಹಾಗೂ ಬಸವರಾಜು ಅವರ ತಂಡವು ಬಹುಮಾನ ಸ್ವೀಕರಿಸಿತು. 
ತೀರ್ಪುಗಾರರಾದ ಕುಲಕರ್ಣಿ (ಎಡದಿಂದ ಮೂರನೆಯವರು) ಅವರಿಂದ ದಿ ಪ್ರಿಂಟರ್ಸ್‌(ಮೈಸೂರು) ಪ್ರೈವೇಟ್‌ ಲಿಮಿಟೆಡ್‌ (ಟಿಪಿಎಂಎಲ್‌) ಮುದ್ರಣ ಹಾಗೂ ನಿರ್ವಹಣೆ ವಿಭಾಗದ ಮಂಗೈಯರ್ ತಿಲಗಂ, ಲೋಕನಾಥ್ ಹಾಗೂ ಬಸವರಾಜು ಅವರ ತಂಡವು ಬಹುಮಾನ ಸ್ವೀಕರಿಸಿತು.    

ಬೆಂಗಳೂರು: ಕ್ವಾಲಿಟಿ ಸರ್ಕಲ್‌ ಫೋರಂ ಆಫ್‌ ಇಂಡಿಯಾ ಹಾಗೂ ದಯಾನಂದ್‌ ಸಾಗರ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನ ಮೆಕಾನಿಕಲ್‌ ಎಂಜಿನಿಯರಿಂಗ್‌ ವಿಭಾಗ, ಶನಿವಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ ದಿ ಪ್ರಿಂಟರ್ಸ್‌(ಮೈಸೂರು) ಪ್ರೈವೇಟ್ ಲಿಮಿಟೆಡ್‌ (ಟಿಪಿಎಂಎಲ್‌) ಮುದ್ರಣ ಹಾಗೂ ನಿರ್ವಹಣೆ ವಿಭಾಗದ ತಂಡವು ಪಾಲ್ಗೊಂಡು ಮೂರು ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ.

ಕುಮಾರಸ್ವಾಮಿ ಲೇಔಟ್‌ನ ಕಾಲೇಜಿನ ಸಭಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಪೊಕಾ ಯೊಕೆ, ಜಿಡೊಕಾ ಹಾಗೂ ಎಸ್ಎಂಇಡಿ ವಿಭಾಗದ ಸ್ಪರ್ಧೆಗಳಲ್ಲಿ ಬಹುಮಾನ ಬಂದಿದೆ.

ಕುಂಬಳಗೋಡು ಮುದ್ರಣ ವಿಭಾಗದ ಎಜಿಎಂ ಜಿ.ಲೋಕನಾಥ್‌ ಅವರ ನೇತೃತ್ವದಲ್ಲಿ ಮುದ್ರಣ ವಿಭಾಗದ ಹಿರಿಯ ವ್ಯವಸ್ಥಾಪಕಿ ಮಂಗೈಯರ್ ತಿಲಗಂ ಹಾಗೂ ವ್ಯವಸ್ಥಾಪಕ ಬಿ.ಎಸ್‌.ನಾಗೇಂದ್ರ, ಎಲೆಕ್ಟ್ರಿಕಲ್‌ ನಿರ್ವಹಣೆ ವಿಭಾಗದ ವ್ಯವಸ್ಥಾಪಕ ಎಸ್‌.ಎನ್‌.ನಾಗಭೂಷಣ್‌, ಹಿರಿಯ ವ್ಯವಸ್ಥಾಪಕ ಎಲ್‌.ಸುರೇಶ್‌, ಎಕ್ಸಿಕ್ಯೂಟಿವ್‌ ಕೆ.ಎಂ.ಬಸವರಾಜು ಹಾಗೂ ನಿರ್ವಹಣೆ ವಿಭಾಗದ ಸಹಾಯಕ ವ್ಯವಸ್ಥಾಪಕ ಪಾರ್ಥಿಬನ್‌ ಪದ್ಮನಾಭನ್‌ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.