ADVERTISEMENT

ಬಾಗಲಗುಂಟೆಯಲ್ಲಿ ಜಾತ್ರೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 15:55 IST
Last Updated 4 ನವೆಂಬರ್ 2023, 15:55 IST
<div class="paragraphs"><p>ಸಾಂದರ್ಭಿ ಚಿತ್ರ</p></div>

ಸಾಂದರ್ಭಿ ಚಿತ್ರ

   

ಪೀಣ್ಯದಾಸರಹಳ್ಳಿ: ಬಾಗಲಗುಂಟೆ ಮಾರಮ್ಮದೇವಿ ದೇವಸ್ಥಾನ, ವೇಣುಗೋಪಾಲ ಸ್ವಾಮಿ ದೇವಸ್ಥಾನ ಹಾಗೂ ಆಂಜನೇಯಸ್ವಾಮಿ ದೇವಸ್ಥಾನ ಸೇವಾ ಸಮಿತಿ ಆಶ್ರಯದಲ್ಲಿ ಇದೇ 5ರಿಂದ 7ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.

ಜಾತ್ರೆಯ ದಿನ ಸಿಡೆದಹಳ್ಳಿಯಲ್ಲಿ ಡಿಜೆ ಸಂಗೀತಕ್ಕೆ ಕುಟುಂಬಸ್ಥರೆಲ್ಲ ಹೆಜ್ಜೆ ಹಾಕಿ ಸಂಭ್ರಮಿಸುತ್ತಾರೆ. ಪ್ರಸಿದ್ಧ ಜಾತ್ರೆಗೆ ಸುತ್ತಮುತ್ತಲ ಹಳ್ಳಿಗಳಿಂದ ಸಂಪ್ರದಾಯದಂತೆ ಆರತಿಗಳನ್ನು ಹೊತ್ತು ತರಲಾಗುತ್ತದೆ. ಶಾಸಕ ಎಸ್. ಮುನಿರಾಜು ಅವರು ಅಧಿಕಾರಿಗಳ ಜತೆಗೆ ಜಾತ್ರೆ ಸಿದ್ಧತೆ ಕುರಿತು ಸಭೆ ನಡೆಸಿದರು.

ADVERTISEMENT

‘ಸ್ವಚ್ಛತೆ, ನೀರಿನ ಸಮಸ್ಯೆ, ಭದ್ರತೆ, ಸಂಚಾರ, ಕಾನೂನು ಮತ್ತು ಸುವ್ಯವಸ್ಥೆ, ವಿದ್ಯುತ್, ಸ್ಥಳದಲ್ಲಿ ಅಗ್ನಿಶಾಮಕ ದಳ, ಆಂಬುಲೆನ್ಸ್, ಪೊಲೀಸ್ ಬಿಗಿ ಭದ್ರತೆ ಇರಬೇಕು. ನೀರಿನ ಸಮಸ್ಯೆ ಎದುರಾಗಬಾರದು’ ಎಂದು ಶಾಸಕರು ಸೂಚಿಸಿದರು.

‘ಡಿಜೆ ಹಾಕುವುದಕ್ಕೆ ಅನುಮತಿ ಪಡೆದಿಲ್ಲ. ಜಾತ್ರೆಗೆ ಭದ್ರತೆ ಕೈಗೊಳ್ಳಲಾಗಿದೆ’ ಎಂದು ಬಾಗಲಗುಂಟೆ ಠಾಣೆ ಇನ್‌ಸ್ಪೆಕ್ಟರ್‌ ಹನುಮಂತರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.