ಕೆ.ಆರ್.ಪುರ: ‘ಬಲಿಜ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಒಗ್ಗಟ್ಟು ಮುಖ್ಯ’ ಎಂದು ಚಲನಚಿತ್ರ ನಟಿ ತಾರಾ ಅನುರಾಧ ತಿಳಿಸಿದರು.
ಕೆ.ಆರ್.ಪುರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಬಲಿಜ ಯುವಶಕ್ತಿ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಎಲೆ, ಹೂವು, ಬಳೆ ವ್ಯಾಪಾರ, ಕೃಷಿ, ಹೈನುಗಾರಿಕೆ, ಮಂಗಳದ್ರವ್ಯದಂತಹ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವ ಬಲಿಜ ಸಮುದಾಯ ಹಿಂದುಳಿದಿದೆ. ಇದು ಎಲ್ಲಾ ಸಮುದಾಯದ ಜನರೊಂದಿಗೆ ಪ್ರೀತಿಯಿಂದ ಬೆರೆಯುವ ವರ್ಗ’ ಎಂದರು.
ಕರ್ನಾಟಕ ರಾಜ್ಯ ಬಲಿಜ ಯುವಶಕ್ತಿ ರಾಜ್ಯಾಧ್ಯಕ್ಷ ಕೆ.ಟಿ.ರಾಜಕುಮಾರ್ ಮಾತನಾಡಿ, ಸಮುದಾಯದ ಜನರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನದ ಭಾಗವಾಗಿ ಬಲಿಜ ಯುವಶಕ್ತಿ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ’ ಎಂದರು.
ಮಾಜಿ ಶಾಸಕ ಎನ್.ಸಂಪಂಗಿ, ಮುಖಂಡರಾದ ಎಂ.ಎಲ್.ಡಿ.ಸಿ.ಮುನಿರಾಜು, ಮೇಡಹಳ್ಳಿ ಜಗ್ಗಿ, ಎಸ್.ಪಿ.ಶ್ರೀನಿವಾಸ್, ಕೆ.ಎನ್.ಉಮೇಶ್, ಬಿ.ವಿ.ಶ್ರೀನಿವಾಸ್, ಮಮತಾ ದೇವರಾಜ್, ಆಂಜಿನಪ್ಪ, ನೀಲಾ ಸೋಮಶೇಖರ್, ವೀರೇಂದ್ರ ಕುಮಾರ್, ತ್ಯಾಗರಾಜ್, ಸುರೇಂದ್ರ ಈ ಸಂದರ್ಭದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.