ADVERTISEMENT

ಬೆಂಗಳೂರು: ಪಾಸ್‌ಪೋರ್ಟ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಇ–ಮೇಲ್‌

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 16:26 IST
Last Updated 6 ಜನವರಿ 2026, 16:26 IST
<div class="paragraphs"><p>ಶ್ವಾನದಳದಿಂದ ಪರಿಶೀಲನೆ (ಸಂಗ್ರಹ ಚಿತ್ರ)</p></div>

ಶ್ವಾನದಳದಿಂದ ಪರಿಶೀಲನೆ (ಸಂಗ್ರಹ ಚಿತ್ರ)

   

ಬೆಂಗಳೂರು: ಕೋರಮಂಗಲದ ಪಾಸ್‍ಪೋರ್ಟ್‌ ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಕಿಡಿಗೇಡಿಗಳು ಇ–ಮೇಲ್ ಮೂಲಕ ಬೆದರಿಕೆಯ ಸಂದೇಶ ಕಳುಹಿಸಿದ್ದರಿಂದ ಮಂಗಳವಾರ ಆತಂಕ ಸೃಷ್ಟಿಯಾಗಿತ್ತು.

ಕಚೇರಿಯ ಅಧಿಕೃತ ಇ–ಮೇಲ್ ವಿಳಾಸಕ್ಕೆ ಕಿಡಿಗೇಡಿಗಳು ಮಂಗಳವಾರ ಬೆಳಿಗ್ಗೆ ಸಂದೇಶ ಕಳುಹಿಸಿದ್ದರು. ಕೆಲವೇ ಕ್ಷಣದಲ್ಲಿ ಬಾಂಬ್‌ ಸ್ಫೋಟಗೊಳ್ಳಲಿದೆ ಎಂದು ಇ–ಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು. ಇ–ಮೇಲ್‌ ಗಮನಿಸಿದ ಕಚೇರಿಯ ಸಿಬ್ಬಂದಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಿದರು. ತಕ್ಷಣವೇ ಎಲ್ಲ ಸಿಬ್ಬಂದಿಯೂ ಕಚೇರಿಯಿಂದ ಹೊರಕ್ಕೆ ಬಂದಿದ್ದರು.

ADVERTISEMENT

ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಸಿಬ್ಬಂದಿಯು ಪಾಸ್‌ಪೋರ್ಟ್‌ ಕಚೇರಿಗೆ ತೆರಳಿ ತಪಾಸಣೆ ನಡೆಸಿದರು. ಆದರೆ, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ. ಬಳಿಕ ಹುಸಿ ಬಾಂಬ್ ಸಂದೇಶ ಎಂಬುದು ಕಂಡುಬಂತು ಎಂದು ಪೊಲೀಸರು ಹೇಳಿದರು.

ಬಾಂಬ್ ಬೆದರಿಕೆ ಸಂದೇಶದ ಸಂಬಂಧ ಕೋರಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

‘ಮುನ್ನೆಚ್ಚರಿಕಾ ಕ್ರಮವಾಗಿ ಲಾಲ್‍ಬಾಗ್ ರಸ್ತೆಯ ಪಾಸ್‌ಪೋರ್ಟ್ ಕಚೇರಿಯಲ್ಲೂ ತಪಾಸಣೆ ನಡೆಸಲಾಗಿದೆ’ ಎಂದು ಪೊಲೀಸರು ಹೇಳಿದರು.