ADVERTISEMENT

ಬೆಂಗಳೂರು: ನಗರದಲ್ಲಿ ಮತ್ತೆ ಹೆಚ್ಚಿದ ಚಳಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 16:32 IST
Last Updated 4 ಜನವರಿ 2025, 16:32 IST
<div class="paragraphs"><p>&nbsp;ಸಾಂದರ್ಭಿಕ ಚಿತ್ರ</p></div>

 ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಗರದಲ್ಲಿ ವಾರದಿಂದ ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಕುಸಿತ ಕಂಡಿದೆ. ಇದರಿಂದಾಗಿ ಚಳಿ ಹೆಚ್ಚಳವಾಗುತ್ತಿದೆ. 

ವಿವಿಧೆಡೆ ಮುಂಜಾನೆ ದಟ್ಟವಾದ ಮಂಜು ಕಾಣಿಸಿಕೊಳ್ಳುತ್ತಿದೆ. ಕೆಲವೆಡೆ ಶೀತ ಗಾಳಿ ಬೀಸುತ್ತಿದೆ. ಪರಿಣಾಮ ತಾಪಮಾನ ತಗ್ಗುತ್ತಿದೆ. ವಾರದಿಂದ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ವರದಿಯಾಗುತ್ತಿದ್ದರೆ, ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ. 

ADVERTISEMENT

ಡಿಸೆಂಬರ್ ಮೂರನೇ ವಾರದಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದರೆ, ಕನಿಷ್ಠ ಉಷ್ಣಾಂಶ 15.5 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿತ್ತು. ಬಳಿಕ ಮಳೆ-ಬಿಸಿಲಿನಿಂದಾಗಿ ತಾಪಮಾನ ಏರಿಕೆಯಾಗುವ ಜತೆಗೆ ಚಳಿಯೂ ಕಡಿಮೆಯಾಗಿತ್ತು. ಈ ತಿಂಗಳು ಆರಂಭದಲ್ಲಿಯೇ ಚಳಿ ಹೆಚ್ಚಿದ್ದು, ಹವಾಮಾನ ಇಲಾಖೆ ಪ್ರಕಾರ ‘ಲಾ-ನಿನಾ’ ಪರಿಸ್ಥಿತಿಯಿಂದಾಗಿ ಈ ತಿಂಗಳು ಚಳಿಯ ತೀವ್ರತೆ ಹೆಚ್ಚುವ ಸಾಧ್ಯತೆಯಿದೆ. 

ಮುಂದಿನ ಒಂದು ವಾರ ಗರಿಷ್ಠ ಉಷ್ಣಾಂಶ ಮತ್ತಷ್ಟು ಕುಸಿತವಾಗುವ ಸಂಭವದ ಬಗ್ಗೆ ಮುನ್ಸೂಚನೆ ನೀಡಿರುವ ಇಲಾಖೆ, ಗರಿಷ್ಠ ಉಷ್ಣಾಂಶ 25ರಿಂದ 24 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 11ರಿಂದ 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಂಭವವಿದೆ ಎಂದು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.