ADVERTISEMENT

ಬಸವನಗುಡಿ: ಬರ್ಗರ್‌ ಶಾಪ್‌ಗೆ ನುಗ್ಗಿ ದಾಂದಲೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 16:11 IST
Last Updated 11 ಆಗಸ್ಟ್ 2025, 16:11 IST
ಮಾರಕಾಸ್ತ್ರದಿಂದ ಹಲ್ಲೆಗೆ ಮುಂದಾಗಿದ್ದ ಕಿಡಿಗೇಡಿ 
ಮಾರಕಾಸ್ತ್ರದಿಂದ ಹಲ್ಲೆಗೆ ಮುಂದಾಗಿದ್ದ ಕಿಡಿಗೇಡಿ    

ಬೆಂಗಳೂರು: ಬಸವನಗುಡಿಯ ಗಾಂಧಿ ಬಜಾರ್‌ನ ಜಂಬೊ ಕಿಂಗ್ ಬರ್ಗರ್ ಶಾಪ್‌ಗೆ ಹೆಲ್ಮೆಟ್‌ ಧರಿಸಿ ಬಂದಿದ್ದ ವ್ಯಕ್ತಿಯೊಬ್ಬ ಶಾಪ್‌ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿ ಪರಾರಿ ಆಗಿದ್ದಾನೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ.

ಮಾರಕಾಸ್ತ್ರ ಹಿಡಿದುಕೊಂಡು ಬರ್ಗರ್ ಶಾಪ್‌ಗೆ ಬಂದಿದ್ದ ಕಿಡಿಗೇಡಿ ಸ್ಥಳದಲ್ಲಿದ್ದ ಗ್ರಾಹಕರನ್ನು ಬೆದರಿಸಿದ್ದಾನೆ. ಗ್ರಾಹಕರ ಎದುರೇ ಅಂಗಡಿಯ ಬಿಲ್ಲಿಂಗ್ ಯಂತ್ರ, ಗಾಜುಗಳನ್ನು ಒಡೆದು ಹಾಕಿ ಹಾನಿ ಮಾಡಿದ್ದಾನೆ. ಆತಂಕಗೊಂಡ ಗ್ರಾಹಕರು ಸ್ಥಳದಿಂದ ತೆರಳಿದ್ದರು. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

‘ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದಿದ್ದರು. ಒಬ್ಬ ಅಂಗಡಿಯ ಟೇಬಲ್‌ಗೆ ಆಯುಧದಿಂದ ಹೊಡೆದು ಪರಾರಿಯಾಗಿದ್ದಾನೆ. ಜನರ ಮೇಲೆ ಹಲ್ಲೆ ಮಾಡಿಲ್ಲ. ಆರೋಪಿಯ ಬಂಧನದ ಬಳಿಕವಷ್ಟೇ ಆತ ಯಾರು, ಯಾಕಾಗಿ ಕೃತ್ಯ ಎಸಗಿದ್ದಾನೆ ಎಂಬುದು ಗೊತ್ತಾಗಲಿದೆ. ಅಂಗಡಿಯ ಸಿಬ್ಬಂದಿ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗೆ ಶೋಧ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.