ADVERTISEMENT

ಬಿಬಿಎಂಪಿ ಅವ್ಯವಹಾರ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 19:44 IST
Last Updated 4 ಜನವರಿ 2021, 19:44 IST

ಬೆಂಗಳೂರು: ‘ನಾವು ಓಟು ಹಾಕಿ ಗೆಲ್ಲಿಸಿರುವ ಜನಪ್ರತಿನಿಧಿಗಳು ನಮ್ಮ ನೋಟು ನುಂಗುತ್ತಿದ್ದಾರೆ‌. ಬೇರೆ ಬೇರೆ ರೂಪದಲ್ಲಿ ಹಣ ಖರ್ಚು ಮಾಡಿ ನಮ್ಮನ್ನೆಲ್ಲ ದೋಚುತ್ತಿದ್ದಾರೆ' ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆರೋಪಿಸಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,’ ₹27.7 ಕೋಟಿಗೆ ಖರೀದಿಸಿದ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ ಬಳಕೆ, ಸ್ಟಾಕ್ ಪುಸ್ತಕಗಳ ನಿರ್ವಹಣೆಯಲ್ಲಿನ ವ್ಯತ್ಯಾಸ, ನಗದು ಪುಸ್ತಕದ ಅಸಮರ್ಪಕ ನಿರ್ವಹಣೆ ಬಗ್ಗೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ‘ ಎಂದು ದೂರಿದರು.

’ಪ್ರಕರಣದ ಸಂಪೂರ್ಣ ತನಿಖೆ ಮುಗಿಯುವ ತನಕ ಈ ಅವ್ಯವಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು. ನಷ್ಟಕ್ಕೆ ಕಾರಣರಾದ ವ್ಯಕ್ತಿಗಳಿಂದ ಹಣವನ್ನು ವಸೂಲಿ ಮಾಡಬೇಕು. ಬೆಂಗಳೂರಿನ ಎಲ್ಲ ವಿಭಾಗಗಳು ಮತ್ತು 198 ವಾರ್ಡ್‌ಗಳಲ್ಲಿಯೂ ಇದೇ ರೀತಿಯ ಲೆಕ್ಕಪರಿಶೋಧನೆ ನಡೆಸಬೇಕು‘ ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.