ADVERTISEMENT

ಬಿಡಿಎ ಕಾರ್ಯಾಚರಣೆ: ಒಎಂಬಿಆರ್ ಬಡಾವಣೆಯಲ್ಲಿ ₹50 ಕೋಟಿ ಮೌಲ್ಯದ ಸ್ವತ್ತು ವಶ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 16:17 IST
Last Updated 20 ಡಿಸೆಂಬರ್ 2025, 16:17 IST
<div class="paragraphs"><p>ಬಿಡಿಎ ಕಾರ್ಯಾಚರಣೆ ನಡೆಸಿ ಒ.ಎಂ.ಬಿ.ಆರ್ ಬಡಾವಣೆಯಲ್ಲಿ ನಿರ್ಮಿಸಿದ್ದ ಶೆಡ್‌ಗಳನ್ನು ತೆರವು ಮಾಡಿತು.&nbsp;</p></div>

ಬಿಡಿಎ ಕಾರ್ಯಾಚರಣೆ ನಡೆಸಿ ಒ.ಎಂ.ಬಿ.ಆರ್ ಬಡಾವಣೆಯಲ್ಲಿ ನಿರ್ಮಿಸಿದ್ದ ಶೆಡ್‌ಗಳನ್ನು ತೆರವು ಮಾಡಿತು. 

   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಾರ್ಯಾಚರಣೆ ನಡೆಸಿ, ಒ.ಎಂ.ಬಿ.ಆರ್. ಬಡಾವಣೆಯಲ್ಲಿ ಸುಮಾರು ₹ 50 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಬಾಣಸವಾಡಿ ಗ್ರಾಮದ ಸರ್ವೆ ನಂಬರ್ 227/2 ಮತ್ತು 227/4ರಲ್ಲಿ 1 ಎಕರೆ 24 ಗುಂಟೆ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌ಗಳನ್ನು ಜೆಸಿಬಿ ಯಂತ್ರದ ಸಹಾಯದಿಂದ ತೆರವುಗೊಳಿಸಿ, ₹50 ಕೋಟಿ ಬೆಲೆ ಬಾಳುವ ಪ್ರದೇಶವನ್ನು ವಶಪಡಿಸಿಕೊಂಡಿತು.

ಅದೇ ರೀತಿ ರಾಜೀವ್ ಗಾಂಧಿನಗರ, ನಂದಿನಿ ಬಡಾವಣೆಯಲ್ಲೂ ಕಾರ್ಯಾಚರಣೆ ನಡೆಸಿ, ₹2.5 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಜಾರಕಬಂಡೆ ಕಾವಲು ಗ್ರಾಮದ ಸರ್ವೆ ನಂ. 1ರ 2,500 ಚದರ ಅಡಿ ಪ್ರದೇಶಗಳಲ್ಲಿ ಶೆಡ್‌ಗಳನ್ನು ತೆರವುಗೊಳಿಸಿ, ಸುಮಾರು ₹2.5 ಕೋಟಿ ಬೆಲೆ ಬಾಳುವ ಪ್ರದೇಶವನ್ನು ಜಪ್ತಿ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.