ADVERTISEMENT

ಹಾಸಿಗೆ ಬ್ಲಾಕಿಂಗ್ ಪ್ರಕರಣ: ಶಾಸಕ ಸತೀಶ್ ರೆಡ್ಡಿ ಪಿ.ಎ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 7 ಮೇ 2021, 0:58 IST
Last Updated 7 ಮೇ 2021, 0:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರ ಆಪ್ತ ಸಹಾಯಕರೇ ಹಾಸಿಗೆ ಬ್ಲಾಕ್‌ ಮಾಡಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.

ಹಾಸಿಗೆ ಬ್ಲಾಕಿಂಗ್ ಪ್ರಕರಣದಲ್ಲಿ ಬೇಗೂರು ನಿವಾಸಿ ನೇತ್ರಾವತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ನೇತ್ರಾವತಿ ಅವರ ಮಗಳು, ‘ಪ್ರಕರಣದಲ್ಲಿ ಅಮ್ಮನ ಪಾತ್ರವಿಲ್ಲ. ಎಲ್ಲ ಮಾಡಿದ್ದು ಸತೀಶ್ ರೆಡ್ಡಿ ಅವರ ಆಪ್ತ ಸಹಾಯಕ’ ಎಂದು ಆರೋಪಿಸಿದ್ದಾರೆ.

ADVERTISEMENT

‘ನಮ್ಮ ಅಮ್ಮನಿಗೆ (ನೇತ್ರಾವತಿ) ನಾವು ಮೂರು ಜನ ಮಕ್ಕಳು. ನಾನು, ತಮ್ಮ ಹಾಗೂ ಅಕ್ಕ. ಅಮ್ಮ ಕಾಂಗ್ರೆಸ್‌ನಲ್ಲಿದ್ದರು. ಆದರೆ, ಪಕ್ಷದ ಹೆಸರಿನಲ್ಲಿ ಸಾಮಾಜಿಕ ಕೆಲಸ ಮಾಡುತ್ತಿದ್ದರು. ಎಲ್ಲ ಪಕ್ಷದವರಿಗೂ ಸಹಾಯ ಮಾಡುತ್ತಿದ್ದರು.’

‘ಖಾಸಗಿ ಆಸ್ಪತ್ರೆಗೆ ಹೋಗಿದ್ದರೆ ಹೆಚ್ಚು ಹಣ ವೆಚ್ಚವಾಗುತ್ತಿತ್ತು. ಕಡಿಮೆ ಹಣ ನೀಡುವಂತೆ ಆಪ್ತ ಸಹಾಯಕ ಕೇಳಿದ್ದರು. ರೋಗಿಗಳೇ ಅವರಿಗೆ ಹಣ ಕೊಟ್ಟಿದ್ದಾರೆ. ಹಣ ವರ್ಗಾವಣೆ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದೇವೆ. ಆದರೆ, ಪೊಲೀಸರು ಮಾಧ್ಯಮದವರ ಜೊತೆ ಮಾತನಾಡದಂತೆ ತಾಕೀತು ಮಾಡಿದ್ದಾರೆ. ಪ್ರಕರಣದಲ್ಲಿ ಅಮ್ಮನ ಪಾತ್ರವಿಲ್ಲ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.