
ಬೆಂಗಳೂರು: ನಗರದಲ್ಲಿ 2025ರಲ್ಲಿ ಗಾಳಿ ಗುಣಮಟ್ಟ ಐದು ವರ್ಷ ಹಿಂದಿನ ವಾಯುಗುಣಮಟ್ಟ ಸೂಚ್ಯಂಕವನ್ನು (ಎಕ್ಯೂಐ) ಮೀರಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 22ರಷ್ಟು ಗಾಳಿ ಗುಣಮಟ್ಟ ಕುಸಿದಿದೆ.
ಬೆಂಗಳೂರಿನಲ್ಲಿ ಒಂದು ದಿನ ಸಾಮಾನ್ಯವಾಗಿ ಉಸಿರಾಡಿದರೂ ಅದು ಮೂರು ಸಿಗರೇಟ್ ಸೇದುವುದಕ್ಕೆ ಸಮನಾಗಿರುವಷ್ಟು ಗಾಳಿ ಗುಣಮಟ್ಟ ಹಾಳಾಗಿದೆ. 2020ರ ಫೆಬ್ರುವರಿಯಲ್ಲಿ ನಗರದಲ್ಲಿ ಎಕ್ಯೂಐ ಸರಾಸರಿ 131 ದಾಖಲಾಗಿತ್ತು. ಈ ವರ್ಷದ ಡಿಸೆಂಬರ್ 27ರ ವೇಳೆಗೆ ಎಕ್ಯೂಐ ಸರಾಸರಿ 143 ಆಗಿದೆ. ಡಿಸೆಂಬರ್ 21ರಂದು 175 ಎಕ್ಯೂಐ ದಾಖಲಾಗಿತ್ತು.
2025ರ ಅಕ್ಟೋಬರ್ ನಂತರ ನಗರದ ಗಾಳಿಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದ್ದು, ಡಿಸೆಂಬರ್ 5ರ ನಂತರ, ದಿನದ ಸರಾಸರಿ ಐಕ್ಯೂಐ 149ಕ್ಕಿಂತ ಹೆಚ್ಚೇ ಇದೆ. 2025ರಲ್ಲಿ ಎರಡನೇ ಬಾರಿಗೆ ಒಂದು
ದಿನದ ಸರಾಸರಿ ಎಕ್ಯೂಐ (166) ಡಿ.15ರಂದು ದಾಖಲಾಗಿದ್ದು, ನವೆಂಬರ್ 28ರಂದು ಕೂಡ 167 ಎಕ್ಯೂಐ ದಾಖಲಾಗಿತ್ತು. ಅಕ್ಟೋಬರ್ 1ರಿಂದ ಡಿಸೆಂಬರ್ 15ರವರೆಗಿನ ಅವಧಿಯಲ್ಲಿ ನವೆಂಬರ್ 22ರಂದು ಮಾತ್ರ ಅತಿಕಡಿಮೆ ಎಕ್ಯೂಐ (52) ದಾಖಲಾಗಿತ್ತು.
2025ರ 361 ದಿನಗಳಲ್ಲಿ (ಡಿಸೆಂಬರ್ 27ರವರೆಗೆ) ಎರಡು ದಿನಗಳು ಮಾತ್ರ ಗಾಳಿ ಗುಣಮಟ್ಟ ಉತ್ತಮ ಮಟ್ಟದಲ್ಲಿತ್ತು. 253 ದಿನಗಳಲ್ಲಿ ಸಮಾಧಾನಕರ, 81 ದಿನಗಳಲ್ಲಿ ಮಧ್ಯಮ ಮತ್ತು 24 ದಿನ ಗಾಳಿ ಗುಣಮಟ್ಟದ ಸೂಚ್ಯಂಕ ಅನಾರೋಗ್ಯಕರ ಮಟ್ಟದಲ್ಲಿತ್ತು. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ 2025ರಲ್ಲಿ ಗಾಳಿ ಅತಿಹೆಚ್ಚು ಮಾಲಿನ್ಯಗೊಂಡಿದೆ ಎಂದು ಮಾಪನ ಕೇಂದ್ರಗಳ ದತ್ತಾಂಶ ತಿಳಿಸಿದೆ.
ಎಕ್ಯೂಐ ಸರಾಸರಿ
ವರ್ಷ; ಎಕ್ಯೂಐ
2020; 86
2021; 84
2022; 87
2023; 78
2024; 73
2025; 89
131 ಎಕ್ಯೂಐ: ಬೆಂಗಳೂರಿನಲ್ಲಿ 2020ರ ಫೆಬ್ರುವರಿಯಲ್ಲಿ ಅತಿಹೆಚ್ಚು ಗಾಳಿ ಮಾಲಿನ್ಯ ದಾಖಲಾಗಿತ್ತು
33 ಎಕ್ಯೂಐ: 2023ರ ಜೂನ್‌ನಲ್ಲಿ ಅತಿ ಕಡಿಮೆ ಮಾಲಿನ್ಯ ದಾಖಲಾಗಿತ್ತು
71 ಎಕ್ಯೂಐ; ನಗರದಲ್ಲಿ ಡಿ.3ರಂದು ದಾಖಲಾದ (ಸಂಜೆ 4) ಕನಿಷ್ಠ ಗಾಳಿ ಮಾಲಿನ್ಯ
175 ಎಕ್ಯೂಐ; ನಗರದಲ್ಲಿ ಡಿ.21ರಂದು ದಾಖಲಾದ (ಬೆಳಿಗ್ಗೆ 4.05) ಗರಿಷ್ಠ ಗಾಳಿ ಮಾಲಿನ್ಯ
====
0-50 ಎಕ್ಯೂಐ: ಉತ್ತಮ
51–100 ಎಕ್ಯೂಐ: ಸಮಾಧಾನಕರ
101–150 ಎಕ್ಯೂಐ: ಮಧ್ಯಮ
151–200 ಎಕ್ಯೂಐ: ಅನಾರೋಗ್ಯಕರ
201-250 ಎಕ್ಯೂಐ: ತೀವ್ರ ಅನಾರೋಗ್ಯಕರ
251–300 ಎಕ್ಯೂಐ: ಅಪಾಯಕಾರಿ
ನಗರದಲ್ಲಿ 2025ರಲ್ಲಿ ದಾಖಲಾದ ಎಕ್ಯೂಐ
ತಿಂಗಳು; ಎಕ್ಯೂಐ
ಜನವರಿ; 111
ಫೆಬ್ರುವರಿ; 104
ಮಾರ್ಚ್; 98
ಏಪ್ರಿಲ್; 87
ಮೇ; 72
ಜೂನ್; 70
ಜುಲೈ; 60
ಆಗಸ್ಟ್; 57
ಸೆಪ್ಟೆಂಬರ್; 63
ಅಕ್ಟೋಬರ್; 83
ನವೆಂಬರ್;124
ಡಿಸೆಂಬರ್; 143
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.