ADVERTISEMENT

ಬನಶಂಕರಿ‌ ದೇವಿಯ ರಥೋತ್ಸವ: ಬಾಳೆಹಣ್ಣು, ಉತ್ತತ್ತಿ ಎಸೆದು ಹರಕೆ ತೀರಿಸಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 15:19 IST
Last Updated 3 ಜನವರಿ 2026, 15:19 IST
<div class="paragraphs"><p>ಬನಶಂಕರಿ ದೇವಿಯ ಬ್ರಹ್ಮರಥೋತ್ಸದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು </p></div>

ಬನಶಂಕರಿ ದೇವಿಯ ಬ್ರಹ್ಮರಥೋತ್ಸದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು

   

ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಬೆಂಗಳೂರು: ನಗರದ ಕನಕಪುರ ರಸ್ತೆಯಲ್ಲಿ ಶನಿವಾರ ಬನಶಂಕರಿ‌ ದೇವಿಯ ರಥೋತ್ಸವ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಉತ್ತತ್ತಿ, ಬಾಳೆ ಹಣ್ಣು ಎಸೆದು ಹರಕೆ ತೀರಿಸಿದರು.

ADVERTISEMENT

ಬೆಳಿಗ್ಗಿನಿಂದ ಮೃತ್ಯುಂಜಯ ಪುರಸ್ಸರ ನವಗ್ರಹ ಶಾಂತಿ, ದೇವಿ ಮೂಲಮಂತ್ರ ಹೋಮ, ರಥಾಂಗಹೋಮಗಳು ಜರುಗಿದವು. ಮಧ್ಯಾಹ್ನ ಬನಶಂಕರಿ ಅಮ್ಮನವರ ಮೂರ್ತಿಯನ್ನು ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಯಿತು. ಜನರು ರಥ ಎಳೆದು ಭಕ್ತಿ ಭಾವ ಪ್ರದರ್ಶಿಸಿದರು.

ವೀರಗಾಸೆ, ಗೊಂಬೆ ಕುಣಿತ, ದೇವರ ಪಟ ಕುಣಿತ, ಚೆಂಡೆ ವಾದನಗಳು ಸಾಥ್‌ ನೀಡಿದವು. ಬನಶಂಕರಿ ದೇವಸ್ಥಾನದಲ್ಲಿ ಮಾತ್ರವಲ್ಲದೇ ಸುತ್ತಮುತ್ತಲಿನ ಎಲ್ಲ ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆ ನಡೆಯಿತು. ಪೊಲೀಸರು ಬಿಗಿ ಬಂದೋಬಸ್ತು ಒದಗಿಸಿದ್ದರು.

ಸಂಜೆ ಶಾಕಾಂಬರಿ ದೇವಿಗೆ ದೂಳೋತ್ಸವ, ಬನಶಂಕರಿ ದೇವಿ, ಚೌಡೇಶ್ವರಿ ದೇವಿ, ಪುಟ್ಟೇನಹಳ್ಳಿ ಆಂಜನೇಯ ಸ್ವಾಮಿ, ಪಾರ್ವತಿ ಪರಮೇಶ್ವರ ದೇವರು, ಸೀತಾಲಕ್ಷ್ಮಣ ಹನುಮಂತ ಸಮೇತ ರಾಮಚಂದ್ರ ಸ್ವಾಮಿಗೆ, ಮಹಾಗಣಪತಿ, ವರಪ್ರಸಾದ್ ಆಂಜನೇಯ ಸ್ವಾಮಿ, ಸುಬ್ರಹ್ಮಣ್ಯೇಶ್ವರ ಸ್ವಾಮಿಗೆ ಮುತ್ತಿನ ಪಲಕ್ಕಿ ಉತ್ಸವ ನೆರವೇರಿತು.

‘ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿ ಇಲಾಖೆ ವತಿಯಿಂದ ಬ್ರಹ್ಮರಥೋತ್ಸವ ಶಾಂತಿಯುತವಾಗಿ ನೆರವೇರಿತು’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.