ADVERTISEMENT

ಬೆಂಗಳೂರು: 6,855 ರೂಪಾಯಿ ಆಸೆಗೆ ₹2.7 ಲಕ್ಷ ಕಳೆದುಕೊಂಡ ವೃದ್ಧ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 20:13 IST
Last Updated 6 ಜನವರಿ 2022, 20:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸೈಬರ್‌ ವಂಚಕರ ಆಮಿಷಕ್ಕೆ ಒಳಗಾದ ಯಲಚೇನಹಳ್ಳಿಯ ವೃದ್ಧರೊಬ್ಬರು ₹2.7 ಲಕ್ಷ ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ದಕ್ಷಿಣ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘63 ವರ್ಷ ವಯಸ್ಸಿನ ನಾಗೇಶ್‌ ಅವರು ಖಾಸಗಿ ಬ್ಯಾಂಕೊಂದರಿಂದ ಕ್ರೆಡಿಟ್‌ ಕಾರ್ಡ್‌ ‍ಪಡೆದಿದ್ದರು. ‘ನಿಮ್ಮ ಕ್ರೆಡಿಟ್‌ ಕಾರ್ಡ್‌ಗೆ ₹6,855 ಮೊತ್ತದ ಪಾಯಿಂಟ್ಸ್‌ಗಳು ಲಭಿಸಿವೆ. ಆ ಹಣವನ್ನು ಡಿಸೆಂಬರ್‌ 28ರೊಳಗೆ ಪಡೆದುಕೊಳ್ಳಬೇಕು’ ಎಂಬ ಸಂದೇಶವನ್ನು ಸೈಬರ್‌ ಖದೀಮರು2021ರ ಡಿಸೆಂಬರ್‌ 27 ರಂದು ನಾಗೇಶ್ ಅವರಿಗೆ ಕಳುಹಿಸಿದ್ದರು. ಬಳಿಕ ಲಿಂಕ್‌ವೊಂದನ್ನು ರವಾನಿಸಿ ಅದರಲ್ಲಿ ಕೇಳಲಾದ ಮಾಹಿತಿಗಳನ್ನು ಒದಗಿಸುವಂತೆ ಸೂಚಿಸಿದ್ದರು’ ಎಂದು ಪೊಲೀಸರು ವಿವರಿಸಿದ್ದಾರೆ.

‘ನಾಗೇಶ್‌ ಅವರುಸೈಬರ್‌ ವಂಚಕರ ಮಾತುಗಳನ್ನು ನಂಬಿ ಅವರು ಕಳುಹಿಸಿದ್ದ ಲಿಂಕ್‌ ಕ್ಲಿಕ್ಕಿಸಿದ್ದರು. ಕೂಡಲೇ ವಂಚಕರು ಅವರ ಬ್ಯಾಂಕ್‌ ಖಾತೆಯಿಂದ ಹಂತ ಹಂತವಾಗಿ ಹಣ ಡ್ರಾ ಮಾಡಿಕೊಂಡಿದ್ದರು’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.