ಚಿನ್ನಾಭರಣ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಅವರ ಮಾಲೀಕತ್ವದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಚಿನ್ನಾಭರಣಗಳನ್ನು ಪಡೆದು ವಂಚಿಸಲಾಗಿದೆ.
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಬಸವನಗುಡಿ ಶಾಖೆಯ ಮ್ಯಾನೇಜರ್ ಭೀಮರಾಜು ನೀಡಿರುವ ದೂರಿನ ಮೇರೆಗೆ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜನವರಿ 14ರಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಬಸವನಗುಡಿ ಶಾಖೆಯ 1 ಕೆ.ಜಿ. 249 ಗ್ರಾಂ ಚಿನ್ನದ ಆಭರಣಗಳನ್ನು ಹಾಲ್ ಮಾರ್ಕ್ ಮುದ್ರೆ ಹಾಕಲು ನಗರತ್ ಪೇಟೆಯ ಕೊನಾರ್ಕ್ ಹಾಲ್ ಮಾರ್ಕಿಂಗ್ ಸೆಂಟರ್‌ಗೆ ನೀಡಲಾಗಿತ್ತು. ಜನವರಿ 15ರಂದು ಚಿನ್ನಾಭರಣ ಕೊಡುವಂತೆ ಸೆಂಟರ್‌ನ ಮಾಲೀಕ ಭರತ್ ಚಟಡ್ ಅವರನ್ನು ಕೇಳಿದಾಗ, ಚಿನ್ನಾಭರಣ ವಾಪಸ್ ಕೊಡದೇ, ನಿಮ್ಮ ಸಂಸ್ಥೆಯ ಉದ್ಯೋಗಿಯೇ ಕಳ್ಳತನ ಮಾಡಿದ್ದಾನೆ ಎಂದು ಉತ್ತರಿಸಿದ್ದಾರೆ. ಭರತ್ ಚಟಡ್ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಮ್ಯಾನೇಜರ್ ದೂರಿನಲ್ಲಿ ತಿಳಿಸಿದ್ದಾರೆ.
‘ರಾಜ್ಯದಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ .ಗೃಹ ಇಲಾಖೆ ಇದೆಯೋ, ಇಲ್ಲವೋ ಎಂಬ ಅನುಮಾನ ಮೂಡಿದೆ. ಚಿನ್ನದಂಗಡಿ ನಡೆಸಬೇಕಾ? ಬಿಡಬೇಕಾ? ಎಂಬ ಭಯ ಕಾಡುತ್ತಿದೆ. ಗೃಹ ಸಚಿವರು ಪೊಲೀಸ್ ಬಂದೋಬಸ್ತ್ ಮತ್ತಷ್ಟು ಬಿಗಿಗೊಳಿಸಬೇಕು’ ಎಂದು ಟಿ.ಎ.ಶರವಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.