ADVERTISEMENT

ಬೆಂಗಳೂರು | ಸಾಂಸ್ಕೃತಿಕ ಮುನ್ನೋಟ: ‘ಕಲಾ ಸ್ಪಂದನ’ ಸಂಗೀತ–ನೃತ್ಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 23:30 IST
Last Updated 25 ಫೆಬ್ರುವರಿ 2026, 23:30 IST
<div class="paragraphs"><p>ಸುದೀಪ್ತ ಜಿ. ಮತ್ತು ಪ್ರೀತಿ ಚೌಧರಿ</p></div>

ಸುದೀಪ್ತ ಜಿ. ಮತ್ತು ಪ್ರೀತಿ ಚೌಧರಿ

   

‘ಕಲಾ ಸ್ಪಂದನ’ ಸಂಗೀತ–ನೃತ್ಯ

ಬೆಂಗಳೂರು: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಟ್ರಸ್ಟ್ ಹಾಗೂ ಅಲಂಕೃತ ಸೆಂಟರ್ ಫಾರ್‌ ಪರ್ಫಾರ್ಮಿಂಗ್ ಆರ್ಟ್ಸ್‌ ಇದೇ 28ರಂದು ಸಂಜೆ 5 ಗಂಟೆಗೆ ಜಯನಗರದ 5ನೇ ಬ್ಲಾಕ್‌ನಲ್ಲಿರುವ ಸನಾತನ ಕಲಾಕ್ಷೇತ್ರದಲ್ಲಿ ‘ಕಲಾ ಸ್ಪಂದನ’ ಶಾಸ್ತ್ರೀಯ ಸಂಗೀತ–ನೃತ್ಯ ತಿಂಗಳ ಕಾರ್ಯಕ್ರಮ ಹಮ್ಮಿಕೊಂಡಿದೆ. 

ಸುದೀಪ್ತ ಜಿ. ಮತ್ತು ಪ್ರೀತಿ ಚೌಧರಿ ಅವರಿಂದ ಕಥಕ್ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ. ಪೂರ್ಣಾ ಹೆಬ್ಬಾರ್, ಪ್ರಜ್ಞಾ ಹೆಬ್ಬಾರ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದ್ದು, ರೋಹನ್‌ ಕುಮಾರ್ ತಬಲಾದಲ್ಲಿ ಸಾಥ್ ನೀಡಲಿದ್ದಾರೆ. 

ADVERTISEMENT

‘ಪಶ್ಚಾತಾಪ’ ನಾಟಕ ಪ್ರದರ್ಶನ

ಬೆಂಗಳೂರು: ಸಂಧ್ಯಾ ಜನ ಸಂಸ್ಕೃತಿ ಟ್ರಸ್ಟ್ ಇದೇ 28ರಂದು ತನ್ನ 8ನೇ ವರ್ಷದ ವಾರ್ಷಿಕೋತ್ಸದ ಅಂಗವಾಗಿ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಗಾಯನ ಹಾಗೂ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. 

ಸಂಜೆ 4 ಗಂಟೆಗೆ ಪಿ.ರುದ್ರಪ್ಪ ಮತ್ತು ತಂಡದಿಂದ ಗೀತ ಗಾಯನ ನಡೆಯಲಿದೆ. ಸಂಜೆ 6.30ರಿಂದ ‘ಪಶ್ಚಾತಾಪ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಫೋಟೋ ವೆಂಕಿ ಈ ನಾಟಕ ರಚಿಸಿ ನಿರ್ದೇಶಿಸಿದ್ದಾರೆ.

ಯಕ್ಷಗಾನ ಕಾರ್ಯಾಗಾರ

ಬೆಂಗಳೂರು: ಕುಂದಾಪುರದ ನಾದಾವಧಾನ ಪ್ರತಿಷ್ಠಾನವು ಇದೇ 28ರಂದು ಬೆಳಿಗ್ಗೆ 10ರಿಂದ ರಾಜಾಜಿನಗರದ ಚಿತ್ಪಾವನ ಸಭಾಭವನದಲ್ಲಿ ಬಡಗುತಿಟ್ಟು ಹಿಮ್ಮೇಳ ಕಾರ್ಯಾಗಾರ ಹಮ್ಮಿಕೊಂಡಿದೆ. ಆಸಕ್ತರು ಮೊ.ಸಂಖ್ಯೆ 9940469916 ಅಥವಾ 9448276944ಕ್ಕೆ ಸಂಪರ್ಕಿಸಬಹುದಾಗಿದೆ. 

ಯಕ್ಷಗಾನ ತಾಳಮದ್ದಳೆ

ಬೆಂಗಳೂರು: ನಿರ್ಮಾಣ್ ಯಕ್ಷ ಬಳಗವು ಇದೇ 28ರಂದು ಸಂಜೆ 5.30ಕ್ಕೆ ಕೋಣನಕುಂಟೆ ಕ್ರಾಸ್‌ ಬಳಿಯ ವಲ್ಲಭ ನಗರದಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ‘ಶ್ರೀಕೃಷ್ಣ ಸಂಧಾನ’ ಯಕ್ಷಗಾನ ತಾಳಮದ್ದಳೆ ಹಮ್ಮಿಕೊಂಡಿದೆ. 

ಹಿಮ್ಮೇಳದಲ್ಲಿ ರಕ್ಷಿತ್ ಭಟ್ಟ ಮೂರೂರು, ಆಗ್ನೇಯ ಭಟ್ ಕ್ಯಾಸನೂರು, ನಾರಾಯಣ ಮೂರ್ತಿ ಹೊಸಬಾಳೆ, ಶ್ರೀರಮಣ ಭಟ್ಟ ಮೂರೂರು, ಮುಮ್ಮೇಳದಲ್ಲಿ ಶಿವಕುಮಾರ್ ಬೇಗಾರ್, ರವಿ ಐತುಮನೆ ಹಾಗೂ ಚಂದನ್ ಕಲಾಹಂಸ ಭಾಗವಹಿಸಲಿದ್ದಾರೆ. 

‘ಒಮ್ಮೆ ಹೆಣ್ಣಾಗು’ ನಾಟಕ
ಬೆಂಗಳೂರು: ಕೋರಮಂಗಲದಲ್ಲಿರುವ ಇಂಡಿಯನ್ ಹೆರಿಟೇಜ್ ಅಕಾಡೆಮಿ ಇದೇ 27ರಂದು ಸಂಜೆ 6.30ಕ್ಕೆ ತನ್ನ ಕೇಂದ್ರದಲ್ಲಿ ‘ಒಮ್ಮೆ ಹೆಣ್ಣಾಗು’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ. ರಂಗಾಯಣ ಮೈಸೂರು ಹಾಗೂ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ಪ್ರದರ್ಶನ ಆಯೋಜಿಸಲಾಗಿದೆ. ಲೇಖಕಿ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಸಂಕಲನದ ಆಯ್ದ ಕಥೆಗಳನ್ನು ಆಧರಿಸಿದ ನಾಟಕ ಇದಾಗಿದ್ದು, ಸವಿತಾ ರಾಣಿ ನಿರ್ದೇಶಿಸಿದ್ದಾರೆ. ಪ್ರವೇಶ ಉಚಿತ ಇರಲಿದೆ.
ಸಂಗೀತ ಕಛೇರಿ
ಬೆಂಗಳೂರು: ಗುರುರಾವ್ ದೇಶಪಾಂಡೆ ಸಂಗೀತ ಸಭಾ ಇದೇ 28ರಂದು ರಾತ್ರಿ 9 ಗಂಟೆಯಿಂದ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ರಾತ್ರಿಯಿಡೀ ಸಂಗೀತ ಮಹೋತ್ಸವ ಹಮ್ಮಿಕೊಂಡಿದೆ. ಗುರುರಾವ್ ದೇಶಪಾಂಡೆ ಹಾಗೂ ಭೀಮಸೇನ ಜೋಶಿ ದತ್ತಿ ಸಂಗೀತ ಮಹೋತ್ಸವ ಇದಾಗಿದೆ. ಯೋಗೇಶ್ ಸಂಸಿ, ವಿನಾಯಕ ತೊರವಿ, ರುಚಿರ ಕೇದಾರ್, ಇಂದ್ರಯುದ್ಧ್ ಮಜುಂದಾರ್ ಹಾಗೂ ದತ್ತಾತ್ರೇಯ ವೇಲಂಕರ್ ಭಾಗವಹಿಸುತ್ತಾರೆ. ಪ್ರವೇಶ ಉಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.