ADVERTISEMENT

ದಸರಾ ಪ್ರಯುಕ್ತ ಮಾರುಕಟ್ಟೆ ರಂಗು: ತಾತ್ಕಾಲಿಕ ಮಾರುಕಟ್ಟೆಗಳು ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 22:34 IST
Last Updated 2 ಅಕ್ಟೋಬರ್ 2022, 22:34 IST
   

ಬೆಂಗಳೂರು: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬವನ್ನು ಸಂಭ್ರಮ–ಸಡಗರದಿಂದ ಆಚರಿಸಲು ನಗರದ ಜನತೆ ಸಿದ್ಧವಾಗಿದ್ದು, ಭಾನುವಾರ ಹೂವು ಮತ್ತು ಹಣ್ಣಿನ ಖರೀದಿ ಜೋರಾಗಿತ್ತು.

ನವರಾತ್ರಿ ಆಚರಣೆಯ ವೇಳೆ ಪ್ರತಿ ವರ್ಷ ಹೂವುಗಳ ದರ ಏರಿಕೆಯಾಗುತ್ತದೆ. ಎರಡು ವಾರಗಳವರೆಗೆ ಧಾರ್ಮಿಕ ಆಚರಣೆಗಳು ನಡೆಯುವುದರಿಂದ ಈ ಸಮಯದಲ್ಲಿ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂದು ಕೆ.ಆರ್. ಮಾರುಕಟ್ಟೆಯ ಹೂವಿನ ವ್ಯಾಪಾರಿಗಳು ತಿಳಿಸಿದರು.

‘ದಸರಾ ಹಬ್ಬದಲ್ಲಿ ಸೇವಂತಿಗೆ, ಕನಕಾಂಬರ, ಗುಲಾಬಿ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆಯುಧ ಪೂಜೆಯಂದು ವಾಹನಗಳು, ಕಚೇರಿ, ಮನೆಯಲ್ಲಿರುವ ವಸ್ತುಗಳನ್ನು ಅಲಂ ಕರಿಸಿ ಪೂಜೆ ಮಾಡಲಾಗುತ್ತದೆ.
ವಾಹನ ಗಳ ಅಲಂಕಾರಕ್ಕೆ ಹೂವು ಹೆಚ್ಚಾಗಿ ಮಾರಾಟವಾಗುತ್ತದೆ. ಗುಣಮಟ್ಟದ ಹೂವಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚು. ಆಗ ಬೆಲೆಯೂ ಏರಿಕೆಯಾಗುವುದು ಸಾಮಾನ್ಯ’
ಎಂದು ಕೆ.ಆರ್.ಮಾರು ಕಟ್ಟೆಯ ಹೂವಿನ ವರ್ತಕ ಗಂಗಾ ಮಾಹಿತಿ ನೀಡಿದರು.

ADVERTISEMENT

ಮಾರುಕಟ್ಟೆಯ ಎಲ್ಲೆಡೆಯೂ ಜೋರಾಗಿತ್ತು. ಆಯುಧ ಪೂಜೆಯ ದಿನ ಮನೆ, ವಾಹನ, ಅಂಗಡಿ, ಕಾರ್ಖಾನೆ ಬಳಿ ಒಡೆಯುವ ಬೂದುಗುಂಬಳ ಕೆ.ಜಿಗೆ ₹50ರಂತೆ ಮತ್ತು ಗಾತ್ರದ ಆಧಾರದ ಮೇಲೆ
ಒಂದಕ್ಕೆ ₹150–200ರಂತೆ ಮಾರಾಟವಾಗಿದೆ.

ನಗರದ ಕೆ.ಆರ್‌. ಮಾರುಕಟ್ಟೆ, ಯಶವಂತಪುರ, ಬಸವನಗುಡಿ ಮಾರು ಕಟ್ಟೆ ಪ್ರದೇಶಗಳು ಜನಜಂಗುಳಿಯಿಂದ ಕೂಡಿದ್ದವು. ತರಕಾರಿ, ಅಲಂಕಾರಿಕ ವಸ್ತುಗಳು, ದಿನಸಿ, ಬೂದು
ಗುಂಬಳ, ಬಾಳೆಕಂದು ಖರೀದಿ ಜೋರಾಗಿತ್ತು.

‘ಬೀನ್ಸ್‌, ಕ್ಯಾರೆಟ್‌, ಹಿರೇಕಾಯಿ, ಹಾಗಲಕಾಯಿ, ಕ್ಯಾಪ್ಸಿಕಮ್ ಮತ್ತು ಬಿಟ್‌ರೂಟ್ ದರಗಳು
ಪ್ರತಿ ಕೆ.ಜಿ.ಗೆ ₹60–70ರವರೆಗೆ ಮಾರಾಟ ಮಾಡಲಾಗುತ್ತಿದೆ. ಮೆಣಸಿನಕಾಯಿ ಪ್ರತಿ ಕೆ.ಜಿಗೆ ₹80 ಮಾರಾಟವಾಗು
ತ್ತಿದೆ’ ಎಂದು ಕೆ.ಆರ್. ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳಾದ
ಕುಮಾರ್, ತಬ್ರೇಜ್ ಮತ್ತು ವೆಂಕಟೇಶ್ ಅವರು ಮಾಹಿತಿ ನೀಡಿದರು.

ತಾತ್ಕಾಲಿಕ ಮಾರುಕಟ್ಟೆಗಳು ಸೃಷ್ಟಿ

ಮಲ್ಲೇಶ್ವರ, ಬಸವನಗುಡಿ, ಹೆಬ್ಬಾಳ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಗಾಯತ್ರಿನಗರ, ಗಾಂಧಿ ಬಜಾರ್, ವೈಟ್‌ಫಿಲ್ಡ್, ಇಂದಿರಾನಗರದಂತಹ ಪ್ರಮುಖ ರಸ್ತೆಯ ಪಾದಚಾರಿ ಮಾರ್ಗ, ಮೆಟ್ರೊ ಸೇತುವೆಯ ಕೆಳಭಾಗ, ಮೇಲ್ಸೇತುವೆಗಳ ಕೆಳಗಡೆ ತಾತ್ಕಾಲಿಕ ಮಾರುಕಟ್ಟೆಗಳು ಸೃಷ್ಟಿಯಾಗಿವೆ. ಗ್ರಾಮೀಣ ಭಾಗದ ರೈತರು, ವ್ಯಾಪಾರಿಗಳು ಬಂದು ಬೂದುಗುಂಬಳ, ಮಾವಿನ ಎಲೆ, ತರಕಾರಿ, ಹೂವು ಮತ್ತು ಹಣ್ಣುಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿತು.

ಹೂವಿನ ದರಪಟ್ಟಿ (ಪ್ರತಿ ಕೆ.ಜಿಗೆ ₹ಗಳಲ್ಲಿ)

ಮಲ್ಲಿಗೆ;800

ಕನಕಾಂಬರ;2000

ಕಾಕಡ;500

ಗುಲಾಬಿ;250

ಸುಗಂಧರಾಜ;300

ಸೇವಂತಿಗೆ (ಪಾಲಿಹೌಸ್);300

ಚೆಂಡುಹೂವು;100

----

ದಸರಾ ವಿಶೇಷ

ಬಾಳೆ ಕಂದು;50(ಜೋಡಿಗೆ)

ದೊಡ್ಡ ಗಾತ್ರದ ಬಾಳೆ ಕಂದು;120(ಜೋಡಿಗೆ)

ಬೂದುಗುಂಬಳ;50(ಕೆ.ಜಿಗೆ)

ನಿಂಬೆ ಹಣ್ಣು;20(ಐದಕ್ಕೆ)

ಮಾವಿನ ಎಲೆಯ ತೋರಣ ಜೋಡಿಗೆ;50

––

ತರಕಾರಿ;ಕಳೆದ ವಾರದ ದರ;ಈ ವಾರದ ದರ(ಚಿಲ್ಲರೆ ಮಾರುಕಟ್ಟೆಯಲ್ಲಿ ‍ಪ್ರತಿ ಕೆ.ಜಿಗೆ)

ಬಟಾಣಿ;80;108

ಬೆಳ್ಳುಳ್ಳಿ;30;40

ಟೊಮೆಟೊ;20;30

ಕ್ಯಾರೆಟ್;80;60

ಶುಂಠಿ;40

ಈರುಳ್ಳಿ;35;30

ಬೀನ್ಸ್;80;60

ಬದನೆ;40;30

ಮೆಣಸಿನಕಾಯಿ;50;80

ಬೆಂಡೆಕಾಯಿ;30;35

ಆಲೂಗಡ್ಡೆ;30;30

ಹೀರೆಕಾಯಿ;50;60

ಚವಳಿಕಾಯಿ;40;30

ಕ್ಯಾಪ್ಸಿಕಮ್;40;50

ಹಾಗಲಕಾಯಿ;50;60

––

ಹಣ್ಣು;ಚಿಲ್ಲರೆ ದರ

ಸೇಬು;80;100

ದಾಳಿಂಬೆ;70;80

ಮೂಸಂಬಿ;50;60

ಏಲಕ್ಕಿ ಬಾಳೆ;50;60

––

ಸೊಪ್ಪು;ಚಿಲ್ಲರೆ(ಕಟ್ಟಿಗೆ)ದರ

ಮೆಂತ್ಯೆ;30

ಕೊತ್ತಂಬರಿ;20

ಸಬ್ಬಕ್ಕಿ;20

ಪಾಲಕ್;20

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.