ಗಾಳಿ ಮತ್ತು ಮಳೆಗೆ ನಗರದ ರಾಜಭವನ ರಸ್ತೆಯಲ್ಲಿ ಬೃಹತ್ ಗಾತ್ರದ ಮರವನ್ನು ರಸ್ತೆ ಮೇಲೆ ಬಿದ್ದಿತ್ತು ಕಾರ್ಮಿಕರು ಮರವನ್ನು ಕತ್ತರಿಸುತ್ತಿರುವ ದೃಶ್ಯ.
-ಪ್ರಜಾವಾಣಿ ಚಿತ್ರ
ಬೆಂಗಳೂರು: ನಗರದ ಹಲವೆಡೆ ಬುಧವಾರ ಮಧ್ಯಾಹ್ನದಿಂದ ರಾತ್ರಿವರೆಗೆ ಭಾರಿ ಮಳೆಯಾಯಿತು. ಮುಖ್ಯ ರಸ್ತೆಗಳಲ್ಲಿ ಮಳೆ ನೀರು ನಿಂತು ಸಂಚಾರ ಅಸ್ತವ್ಯಸ್ತಗೊಂಡಿತ್ತು.
ರಾಜಭವನ ರಸ್ತೆಯಲ್ಲಿ ಮರಬಿದ್ದಿರುವುದರಿಂದ ಚಾಲುಕ್ಯ ಸರ್ಕಲ್ ಕಡೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.
ನಾಗಾರ್ಜುನ ಜಂಕ್ಷನ್ ಕಡೆಯಿಂದ ಜಿಡಿ ಮಾರ ಜಂಕ್ಷನ್, ರೂಪೇನ ಅಗ್ರಹಾರ ಕಡೆಯಿಂದ ಬೊಮ್ಮನಹಳ್ಳಿ,
ಬೆಳ್ಳಂದೂರು ಜಂಕ್ಷನ್ ಕಡೆಯಿಂದ ಎಚ್‌ಎಸ್‌ಆರ್ ಲೇಔಟ್, ಅನಿಲ್ ಕುಂಬ್ಳೆ ವೃತ್ತ, ಕ್ವೀನ್ಸ್ ಜಂಕ್ಷನ್ ಕಡೆಯಿಂದ ಅನಿಲ್ ಕುಂಬ್ಳೆ ವೃತ್ತ, ಕಂಟೋನ್ಮೆಂಟ್ ರೈಲ್ವೆ ಅಂಡರ್‌ಪಾಸ್ ಕಡೆಯಿಂದ ಜಯಮಹಲ್ ರಸ್ತೆ, ಹೆಬ್ಬಾಳ ಡೌನ್‌ರ‍್ಯಾಂಪ್ ಕಡೆಯಿಂದ ವಿಮಾನ ನಿಲ್ದಾಣ, ದೇವಿನಗರ ಕಡೆಯಿಂದ ಕುವೆಂಪು ನಗರ, ಕೆಎಸ್‌ಐಟಿ ಕಾಲೇಜು ಹತ್ತಿರ ಮಳೆ ನೀರು ನಿಂತು ನೈಸ್ ರಸ್ತೆ ಕಡೆಗೆ ವಾಹನ ಸಂಚಾರ ನಿಧಾನಗತಿಯಲ್ಲಿತ್ತು.
ಕೋಣನಕುಂಟೆಯಲ್ಲಿ 4.7 ಸೆಂ. ಮೀ, ರಾಜರಾಜೇಶ್ವರಿ ನಗರದಲ್ಲಿ 4 ಸೆಂ. ಮೀ, ಗೊಟ್ಟಿಗೆರೆಯಲ್ಲಿ
3.7 ಸೆಂ. ಮೀ, ಹೆಮ್ಮಿಗೆಪುರ, ದೊರೆಸಾನಿಪಾಳ್ಯ,ಗೊಲ್ಲಹಳ್ಳಿಯಲ್ಲಿ ತಲಾ 3.5 ಸೆಂ. ಮೀ, ಹಂಪಿನಗರ, ಬಾಣಸವಾಡಿ, ವಿ. ನಾಗೇನಹಳ್ಳಿ, ಅಂಜನಾಪುರದಲ್ಲಿ ತಲಾ 3 ಸೆಂ. ಮೀ, ಬಿಳೇಕಹಳ್ಳಿ, ಗರುಡಾಚಾರ್ಯ ಪಾಳ್ಯ, ವಿದ್ಯಾಪೀಠ, ಪುಲಕೇಶಿನಗರ, ಮಾರುತಿ ಮಂದಿರದಲ್ಲಿ ತಲಾ 2.5 ಸೆಂ. ಮೀ, ಮಹದೇವಪುರ, ಹಗದೂರು, ಸಂಪಂಗಿರಾಮ ನಗರ, ಬಸವೇಶ್ವರ ನಗರ, ಕಾಟನ್ ಪೇಟೆ, ಶೆಟ್ಟಿಹಳ್ಳಿ ನಾಗಪುರದಲ್ಲಿ ತಲಾ
2 ಸೆಂ. ಮೀ ಮಳೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.