
ಪ್ರಜಾವಾಣಿ ವಾರ್ತೆಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿನ ಜನರಲ್ ಕಾರಿಯಪ್ಪ ಸ್ಮಾರಕ ಉದ್ಯಾನದ ಬಳಿ ಬುಧವಾರ ಬೆಂಕಿ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಯಿತು. ಫೀಲ್ಡ್ ಮಾರ್ಷಲ್ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆದ ವೇಳೆ ಬಿದ್ದಿದ್ದ ತ್ಯಾಜ್ಯವನ್ನೆಲ್ಲ ಮಾಣೆಕ್‌ಷಾ ಸ್ಮಾರಕ ಉದ್ಯಾನದ ಸುತ್ತಲಿನ ಕಾಂಪೌಂಡ್ ಬಳಿ ಹಾಕಲಾಗಿತ್ತು. ಕಾಗದ, ಪ್ಲಾಸ್ಟಿಕ್ ತ್ಯಾಜ್ಯದ ಜೊತೆಗೆ, ಉದುರಿದ ಎಲೆಗಳೂ ಸೇರಿದ್ದು, ಅದಕ್ಕೆ ಬೆಂಕಿ ತಗುಲಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ಭವಿಷ್ಯದಲ್ಲಿ ಈ ರೀತಿ ಆಗದಂತೆ ಎಚ್ಚರ ವಹಿಸಬೇಕಿರುವುದು ಅಗತ್ಯವಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.