ADVERTISEMENT

ಬೆಂಗಳೂರು| ಹಣ ಹೇಳಿದ್ದಕ್ಕೆ ಪಾನ್‌ ಶಾಪ್‌ ಮಾಲೀಕನ ಮೇಲೆ ಹಲ್ಲೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 14:19 IST
Last Updated 23 ಫೆಬ್ರುವರಿ 2026, 14:19 IST
   

ಬೆಂಗಳೂರು: ಆವಲಹಳ್ಳಿಯ ಗ್ಯಾಲಕ್ಸಿ ಬಾರ್ ಆ್ಯಂಡ್ ರೆಸ್ಟೊರೆಂಟ್‌ ಪಕ್ಕದ ಪಾನ್‌ ಶಾಪ್‌ ಮಾಲೀಕ ರಾಜು ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಅಡಿ ಇಬ್ಬರನ್ನು ಬ್ಯಾಟರಾಯನಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆವಲಹಳ್ಳಿಯ ವಿನೋಬ ಕಾಲೊನಿಯ ಮಂಜೇಶ್ ಅಲಿಯಾಸ್‌ ‘ಬೆಣ್ಣೆ’ ಮಂಜೇಶ್ (32) ಹಾಗೂ ಆವಲಹಳ್ಳಿ ಮುನೇಶ್ವರ ಬ್ಲಾಕ್‌ನ ಮೂರನೇ ಕ್ರಾಸ್‌ನ ನಿವಾಸಿ ಕೆ.ಶ್ರೀನಿವಾಸ್‌ (33) ಬಂಧಿತರು.

ಪಾನ್‌ ಶಾಪ್‌ ಮಾಲೀಕ ರಾಜು ಅವರು ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ಭಾನುವಾರ ರಾತ್ರಿ 9.30ರ ಸುಮಾರಿಗೆ ಪಾನ್‌ ಶಾಪ್‌ಗೆ ಬಂದಿದ್ದ ಮಂಜೇಶ್ ಹಾಗೂ ಕೆ.ಶ್ರೀನಿವಾಸ್ ಅವರು ಸಿಗರೇಟ್ ತೆಗೆದುಕೊಂಡಿದ್ದರು. ಸಿಗರೇಟ್‌ಗೆ ಹಣ ನೀಡಿರಲಿಲ್ಲ. ಹಣ ಕೇಳಿದ್ದಕ್ಕೆ ಸಿಟ್ಟಿಗೆದ್ದ ಆರೋಪಿಗಳು, ರಾಜು ಅವರ ಮೇಲೆ ಮಾರಕಾಸ್ತ್ರ ಹಾಗೂ ಗಾಜಿನ ಬಾಟಲಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು’ ಎಂದು ಪೊಲೀಸರು ಹೇಳಿದರು.

ಹಲ್ಲೆ ನಡೆಸಿದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.